ಸಭಾಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ MULIYA

ಶ್ರೀ ರಾಮಚಂದ್ರಾಪುರ ಮಠಕ್ಕೆ ಸೇರಿದ ಮುಳಿಯ ನಿವೇಶನದಲ್ಲಿ ನಿರ್ಮಾಣವಾಗಲಿರುವ ಸಭಾಭವನಕ್ಕೆ ಭೂಮಿಪೂಜೆ ನಡೆಯಿತು.ಕುರೂವುಮೂಲೆ ಚಂದ್ರಶೇಖರ ಉಪಾಧ್ಯಾಯ, ಶಿವಪ್ರಸಾದ್‌ ಭಟ್‌ ಅಮೈ, ಹರಿಪ್ರಸಾದ್‌ ಪೆರಿಯಾಪು, ಮೋಹನ ಎ. ಇತರರು ಇದ್ದರು.
ಶ್ರೀ ರಾಮಚಂದ್ರಾಪುರ ಮಠಕ್ಕೆ ಸೇರಿದ ಮುಳಿಯ ನಿವೇಶನದಲ್ಲಿ ನಿರ್ಮಾಣವಾಗಲಿರುವ ಸಭಾಭವನಕ್ಕೆ ಭೂಮಿಪೂಜೆ ನಡೆಯಿತು.ಕುರೂವುಮೂಲೆ ಚಂದ್ರಶೇಖರ ಉಪಾಧ್ಯಾಯ, ಶಿವಪ್ರಸಾದ್‌ ಭಟ್‌ ಅಮೈ, ಹರಿಪ್ರಸಾದ್‌ ಪೆರಿಯಾಪು, ಮೋಹನ ಎ. ಇತರರು ಇದ್ದರು.
Published on
ವಿಟ್ಲ: ಶ್ರೀ ರಾಮಚಂದ್ರಾಪುರ ಮಠಕ್ಕೆ ಸೇರಿದ ಮುಳಿಯ ನಿವೇಶನದಲ್ಲಿ ತಿಮ್ಮಪ್ಪಯ್ಯ ಕಟ್ಟಡ ಕ್ರಿಯಾ ಸಮಿತಿ ವತಿಯಿಂದ ನಿರ್ಮಾಣವಾಗಲಿರುವ ನೂತನ ಸಭಾಭವನಕ್ಕೆ ಬುಧವಾರ ಭೂಮಿಪೂಜೆ ನಡೆಯಿತು. 
ವೈದಿಕರಾದ ಕುರೂವುಮೂಲೆ ಚಂದ್ರಶೇಖರ ಉಪಾಧ್ಯಾಯ, ಶಿವಪ್ರಸಾದ್‌ ಭಟ್‌ ಅಮೈ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು.
ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್‌ ಪೆರಿಯಾಪು, ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಕಟ್ಟಡ ಕ್ರಿಯಾ ಸಮಿತಿ ಅಧ್ಯಕ್ಷ ಮೋಹನ ಎ., ಮಹಾ ಮಂಡಲ ಉಪಾಧ್ಯಕ್ಷ ಶಿವಶಂಕರ ಭಟ್‌, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್‌ ಕಾಕುಂಜೆ, ಕೇಪು ವಲಯ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಕಟ್ಟಡ ಸಮಿತಿಯ ಸಂಚಾಲಕರಾದ ಕಟ್ಟೆ ಕೃಷ್ಣಮೂರ್ತಿ, ಬಲರಾಮ ಬೈಕುಂಜ, ಪ್ರಧಾನ ಕಾರ್ಯದರ್ಶಿ ಜನಾರ್ದನ ಭಟ್‌ ಅಮೈ, ಸಹಕಾರ್ಯದರ್ಶಿ ಕಾನ ಈಶ್ವರ ಭಟ್‌, ಕೋಶಾಧಿಕಾರಿ ಮುರಳಿಕೃಷ್ಣ ಕುಕ್ಕಿಲ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net