ರಾಷ್ಟ್ರ ಸಿಂಚನ ಆನ್‌ಲೈನ್ ನೃತ್ಯ ಸ್ಪರ್ಧೆ - ಗಣರಾಜ್ಯೋತ್ಸವ ನಿಮಿತ್ತ ಮುಳಿಯ ಜ್ಯವೆಲ್ಸ್ ಆಯೋಜನೆ

PTR_15 JAN_1
Published on

ಪುತ್ತೂರು: ನಾವೀನ್ಯ ಹಾಗೂ ಪರಿಶುದ್ಧ ಆಭರಣಗಳಿಗೆ ಮನೆಮಾತಾಗಿರುವ ಮುಳಿಯ ಜ್ಯುವೆಲ್ಸ್ ಗಣರಾಜ್ಯೋತ್ಸವದ ಪ್ರಯುಕ್ತ ಜ.೨೫ ಹಾಗೂ ೨೬ರಂದು ಮುಳಿಯ ರಾಷ್ಟ್ರ ಸಿಂಚನ ಆನ್‌ಲೈನ್ ನೃತ್ಯ ಸ್ಪರ್ಧೆ ಹಮ್ಮಿಕೊಂಡಿದೆ.

ಸೋಲೋ ವಿಭಾಗದಲ್ಲಿ ಮೊದಲ ೧೦೦ ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ೧೨ರಿಂದ ೨೦ ವರ್ಷ ವಯೋಮಿತಿಯ ಹಾಗೂ ಸಾರ್ವಜನಿಕ ವಿಭಾಗ ೨೧ ವರ್ಷ ಮೇಲ್ಪಟ್ಟು ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಗ್ರೂಪ್ ವಿಭಾಗದಲ್ಲಿ ಮೊದಲ ೩೫ ಗುಂಪುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಹೆಸರು ನೊಂದಾಯಿಸಲು ೨೩ ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳಿಗೆ ೯೩೫೩೦೩೦೯೧೬ ಸಂಪರ್ಕಿಸಬಹುದು. ಸ್ಪರ್ಧೆಯ ಮೊದಲು ಕರೆಯ ಮೂಲಕ ಮಾಹಿತಿಯನ್ನು ನೀಡಬೇಕಾಗಿದ್ದು, ಸ್ಪರ್ಧೆಯು ಜೂಮ್ ಮುಖಾಂತರ ನಡೆಯಲಿದೆ. ದೇಶಭಕ್ತಿ ಗೀತೆಗೆ ಅಥವಾ ಚಲನಚಿತ್ರದ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದು. ವೈಯಕ್ತಿ ವಿಭಾಗದ ಸ್ಪಽಗೆ ೨ರಿಂದ ೩ ನಿಮಿಷ ಹಾಗೂ ಗುಂಪಿಗೆ ೪-೫ ನಿಮಿಷ ಸಮಯವಕಾಶವನ್ನು ನೀಡಲಾಗಿದೆ. ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net