ಮುಳಿಯ ಜುವೆಲ್ಲರಿಯಲ್ಲಿ ಕರಿಮಣಿ ಉತ್ಸವ - ಸಾವಿರಕ್ಕೂ ಅಧಿಕ ಸರಗಳ ಸಂಗ್ರಹ, 50ಕ್ಕೂ ಅಧಿಕ ವಿನ್ಯಾಸ

PTR_16 FEB_1
Published on

ಮಾಂಗಲ್ಯದಲ್ಲಿ ಮಂಗಲ ಶಬ್ದವಿದ್ದು, ಚಿನ್ನದಿಂದ ತಯಾರಿಸಲ್ಪಟ್ಟ ಮಾಂಗಲ್ಯ ಧಾರಣೆಯಿಂದ ಸೌಭಾಗ್ಯ ಸಮೃದ್ಧಿಯಾಗುತ್ತದೆ. ಮಾಂಗಲ್ಯ ೨ ಗ್ರಾಂನಿಂದ ಆರಂಭವಾಗಿ ಅತ್ಯಧಿಕ ಚಿನ್ನವನ್ನು ಧರಿಸುವಲ್ಲಿಯವರೆಗೆ ಗ್ರಾಹಕರಿಗೆ ಸಿಗುತ್ತಿರುವುದು ಸಂತೋಷದ ವಿಚಾರ. ಬೆಳ್ಳಿಯ ಬದಲು ಚಿನ್ನವನ್ನು ಧರಿಸುವ ವ್ಯವಸ್ಥೆಯ ಜತೆಗೆ ಕಡುಬಡವರಿಗೂ ಕೈಗೆಟಕುವ ದರದಲ್ಲಿ ಲಭಿಸುವಂತಾಗಿದೆ. ಸಂಸ್ಥೆಯ ಕರಿಮಣಿ ಉತ್ಸವಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಿ ಉತ್ತಮ ಅಭಿವೃದ್ಧಿಯನ್ನು ಹೊಂದುವಂತಾಗಲಿ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ಹೇಳಿದರು.

ಪುತ್ತೂರು ಮುಳಿಯ ಜುವೆಲ್ಲರಿಯಲ್ಲಿ ಫೆ.೧೫ರಿಂದ ೨೯ರವರೆಗೆ ನಡೆಯಲಿರುವ ಕರಿಮಣಿ ಉತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.


ಮುಳಿಯ ಜುವೆಲ್ಲರಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಮಾತನಾಡಿ, ಚಿನ್ನಾಭರಣದ ಮಳಿಗೆಗೆ ಜನರು ಬರುವುದಕ್ಕೆ ಹಿಂಜರಿಯುತ್ತಿದ್ದ ಸಂದರ್ಭ ಪ್ರದರ್ಶನ ಮತ್ತು ಮಾರಾಟ ಕಲ್ಪನೆಯನ್ನು ಪರಿಚಯಿಸಿದ ಮುಳಿಯ ೨೫ ವರ್ಷಗಳ ಹಿಂದೆ ವಿವಿಧ ರೀತಿಯ ಉತ್ಸವಗಳನ್ನು ಆರಂಭಿಸಿದೆ. ಆಭರಣ ಎಂಬುದು ಅಲಂಕಾರವಾಗಿದ್ದು, ಸಂದರ್ಭಗಳಿಗೆ ತಕ್ಕಂತೆ ಬದಲಾಯಿಸಬಹುದಾಗಿದೆ. ಹಿಂದಿನ ಕಾಲದಲ್ಲಿ ಒಂದೇ ಕರಿಮಣಿಯನ್ನು ಜೀವನಪೂರ್ತಿ ಹಾಕುವ ಪದ್ದತಿ ಇತ್ತಾದರೂ ಸದ್ಯ ಮೂರು ನಾಲ್ಕು ಕರಿಮಣಿಗಳನ್ನು ಇಟ್ಟಿಕೊಳ್ಳುವ ಕಾಲ ಈಗ ಇದೆ. ಹೊಸ ಶೈಲಿಗಳನ್ನು ಜನರಿಗೆ ಪರಿಚಯಿಸುವ ಕಾರ್ಯವನ್ನು ಮುಳಿಯ ಮಾಡುತ್ತಿದ್ದು, ಗ್ರಾಹಕರ ಸಹಕಾರ ಇದಕ್ಕೆ ಬೇಕಿದೆ ಎಂದರು.


ಮುಳಿಯ ಜುವೆಲ್ಲರಿ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಆಡಳಿತ ನಿರ್ದೇಶಕಿ ಕೃಷ್ಣವೇಣಿ ಕೇಶವ ಪ್ರಸಾದ್ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಮಾರುಕಟ್ಟೆ ವಿಭಾಗ ಮುಖ್ಯಸ್ಥ ಸಂಜೀವ ಉಪಸ್ಥಿತರಿದ್ದರು.


ವ್ಯವಸ್ಥಾಪಕರಾದ ಯತೀಶ್ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.


ವಿವಿಧ ನಮೂನೆ:
ಮುಳಿಯ ಜುವೆಲ್ಲರಿಯಲ್ಲಿ ನಡೆಯುವ ಉತ್ಸವದ ಅಂಗವಾಗಿ ೨ಗ್ರಾಂನಿಂದ ೧೦೦ ಗ್ರಾಂವರೆಗಿನ ಚಿನ್ನದ ಮಾಂಗಲ್ಯ ಸರಗಳನ್ನು ಬಿಡುಗಡೆ ಮಾಡಲಾಯಿತು. ಸಾವಿರಕ್ಕೂ ಅಧಿಕ ಕರಿಮಣಿ ಸರಗಳ ಸಂಗ್ರಹವಿದ್ದು, ೫೦ಕ್ಕೂ ಅಧಿಕ ವಿನ್ಯಾಸಗಳ ಕರಿಮಣಿ ಸರಗಳು ಲಭ್ಯವಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net