ಸಾಹಿತ್ಯದಲ್ಲಿ ಶ್ರೀಮಂತಿಕೆ ಪಡೆದ ಕ್ಷೇತ್ರ ಮುಳಬಾಗಿಲು

11 mbl 02
Published on

ಮುಳಬಾಗಿಲು: ಮುಳಬಾಗಿಲು ಕ್ಷೇತ್ರ ಧಾರ್ಮಿಕ, ಚಾರಿತ್ರಿಕ ಇತಿಹಾಸ ಹೊಂದಿರುವಂತೆ ಸಾಹಿತ್ಯ ವಲಯದಲ್ಲೂ ಶ್ರೀಮಂತಿಕೆ ಪಡೆದುಕೊಂಡಿದೆ ಎಂದು ತಹಸೀಲ್ದಾರ್​ ವಿ.ಗೀತಾ ಹೇಳಿದರು.

ನಗರದ ಡಿವಿಜಿ ಶಾಲೆಯಲ್ಲಿ ಕನ್ನಡ ಬೆಳಗು ವೇದಿಕೆಯಿಂದ ಡಿವಿಜಿ 138ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಪ್ರತಿಭೆಗಳು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಳ್ಳುವುದು ತುಂಬಾ ಅಪರೂಪದ ಸಂಗತಿ. ಆದ್ದರಿಂದ ಇಂತಹ ಸಾಹಿತ್ಯ ಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

ತಾನೂ ಸಾಹಿತ್ಯ ವಿದ್ಯಾರ್ಥಿಯಾಗಿದ್ದು, ನನಗೂ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕನ್ನಡ ಬೆಳಗು ವೇದಿಕೆ ವತಿಯಿಂದ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗಹಿಸುತ್ತೇನೆ. ಹಾಗಾಗಿ ಯುವಕರಿಗೆ ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಾಹಿತ್ಯದ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡಲಾಗುತ್ತದೆ ಎಂದರು.

ಕನ್ನಡ ಬೆಳಗು ವೇದಿಕೆ ಅಧ್ಯಕ್ಷ ಅತ್ತಿಕುಂಟೆ ಎಸ್​.ಸುಬ್ರಹ್ಮಣಿ ಮಾತನಾಡಿ, ಡಿ.ವಿ.ಗುಂಡಪ್ಪ ಅವರ ಕಗ್ಗದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ಸಾಂಸತಿಕ, ಸಮಾಜ ಸೇರಿ ಬದುಕು, ಜೀವನದ ಪ್ರಯಾಣ, ಹುಟ್ಟು, ಸಾವು ಸೇರಿ ಹಲವು ವಿಷಯಗಳಿವೆ. ಆದ್ದರಿಂದ ಕಗ್ಗದ ಓದು ಮತ್ತು ಅಧ್ಯಯನ ಬರೀ ವಿದ್ಯಾರ್ಥಿಗಳಿಗೆ ಸೀಮಿತವಾಗಬಾರದು. ಮನೆಯಲ್ಲಿನ ಎಲ್ಲರಿಗೂ ಡಿವಿಜಿ ಅವರ ಕಗ್ಗದ ಕಂಠಪಾಠ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಬಂಧ, ಚಿತ್ರಕಲೆ, ಕಗ್ಗದ ಕಂಠಪಾಠ, ಗೀತಗಾಯನ, ಭರತನಾಟ್ಯ ಸೇರಿ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ನಿವೃತ್ತ ಶಿಕ್ಷಕಿ ಸರೋಜಮ್ಮ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಎಸ್​.ಕೆ.ಪದ್ಮಾವತಿ, ಅಂತಾರಾಷ್ಟ್ರೀಯ ಡಾ.ಬಿ.ಆರ್​.ಅಂಬೇಡ್ಕರ್​ ಪ್ರಶಸ್ತಿ ಪಡೆದ ದಲಿತಪರ ಹೋರಾಟಗಾರ ಮೆಕಾನಿಕ್​ ಶ್ರೀನಿವಾಸ್​, ಗ್ರಾಪಂ ಸದಸ್ಯರ ಮಹಾ ಒಕ್ಕೂಟ ತಾಲೂಕು ಅಧ್ಯಕ್ಷ ಪೆತ್ತಾಂಡ್ಲಾಹಳ್ಳಿ ಪಿ.ವಿ.ಶಂಕರ್​, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಗಿರೀಶ್​, ಎಸ್​.ಡಿ.ಎಂ.ಸಿ ಸಂಘದ ತಾಲೂಕು ಅಧ್ಯಕ್ಷ ಹನುಮನಹಳ್ಳಿ ನಾಗೇಶ್​ ಕುಮಾರ್​ ಅವರಿಗೆ ಗೌರವಿಸಲಾಯಿತು.

ಬಿಇಒ ಕೆ.ಎನ್​.ರಾಮಚಂದ್ರಪ್ಪ, ಕನ್ನಡ ಬೆಳಗು ವೇದಿಕೆ ಗೌರವಾಧ್ಯಕ್ಷ ಅಪ್ಪಿಕೊಂಚೇನಹಳ್ಳಿ ಚಂದ್ರಶೇಖರ್​, ಉಪಾಧ್ಯಕ್ಷ ಕೆ.ಆರ್​.ಶಿವರಾಜು, ಕರುನಾಡ ಕನ್ನಡ ಸಂಘದ ಅಧ್ಯಕ್ಷ ಈ.ಶ್ರೀನಿವಾಸಗೌಡ, ಮುಖ್ಯಶಿಕ್ಷಕ ಸೊಣ್ಣಪ್ಪ, ಶಿಕ್ಷಕರಾದ ಆರ್​.ಶಾರದಾ, ಆರ್​.ಭಾರತಿ, ಎಂ.ಮಂಜುಳಾ, ಭಾಗ್ಯಶ್ರೀ, ಸಲ್ಮಾ, ಕವಿತಾ, ಎಸ್​.ಎನ್​.ಭಾಗ್ಯಾ, ಅರುಣ್​ಕುಮಾರಿ, ದೀಪಾ, ನಂದಿನಿ, ಎಸ್​ಡಿಎಂಸಿ ಸದಸ್ಯರಾದ ರಾಧಮ್ಮ, ಮಂಜುಳಮ್ಮ, ಲಕ್ಷ್ಮೀ, ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net