

ವಿಜಯಪುರ: ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜು ಕಂಬಾಗಿ ಮಾತನಾಡಿ, ಎಸ್ಸಿ/ಎಸ್ಟಿ ವರ್ಗದ ಯುವಕರು ವಿವಿಧ ವಿದ್ಯಾರ್ಹತೆಗಳನ್ನು ಹೊಂದಿದ್ದು, ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಕೂಡಲೇ ನಿವೇಶನಗಳನ್ನು ಹಂಚಿಕೆ ಮಾಡಲು ಮುಂಬರುವ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಂಕರ ಚಲವಾದಿ ಮಾತನಾಡಿದರು. ಪ್ರದೀಪ ಚಲವಾದಿ, ಸೋಮು ರಣದೇವಿ, ಸಂಜು ದೊಡಮನಿ, ವಿಜು ಹಿಟ್ನಳ್ಳಿ, ಸಂತೋಷಕುಮಾರ ಹಿರೇರೂಗಿ, ಶಿವರಾಜ ಚಿಕ್ಕಲಕಿ, ಅಕ್ಷಯ ಗಡೇದ, ಯುವರಾಜ ನಾರಾಯಣಪುರ, ಬಬಲು ಗೊಣಸಗಿ ಮತ್ತಿತರರು ಇದ್ದರು.