

ಅಪ್ಪಾಜಿಗೌಡ ಮುಳಬಾಗಿಲು
ನಗರದಲ್ಲಿ ಬಿಡಾಡಿ ಜಾನುವಾರುಗಳ ಉಪಟಳ ಹೆಚ್ಚಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದ್ದು, ಸಂಚಾರಸಿಕ್ಕು(ಟ್ರಾಫಿಕ್) ಸಮಸ್ಯೆ ತಲೆದೂರಿದೆ.
ನಗರದಲ್ಲಿ ಸುವಾರು 50ರಿಂದ 100ಕ್ಕೂ ಹೆಚ್ಚಿನ ದನಗಳು ಗುಂಪು ಗುಂಪಾಗಿ ಮುಖ್ಯರಸ್ತೆಗಳಲ್ಲಿ, ಗಲ್ಲಿ ಬೀದಿಗಳಲ್ಲಿ ಮಲಗುವುದು, ರಸ್ತೆ ಮಧ್ಯದಲ್ಲಿ ಸಂಚರಿಸಿ ವಾಹನ ಸವಾರರಿಗೆ ಡಿಕ್ಕಿ ಹೊಡೆದು ಗಾಯಗೊಳಿಸುತ್ತಿವೆ. ಅದರಲ್ಲೂ ರಸ್ತೆ ಮಧ್ಯದಲ್ಲಿ ಮತ್ತು ರಸ್ತೆ ಬದಿಯಲ್ಲಿ ನೆಡುವ ಸಸಿಗಳು, ಗಿಡಗಳೂ ಬಿಡಾಡಿ ದನಗಳಿಗೆ ಆಹಾರವಾಗಿದ್ದು, ಸಸಿಗಳನ್ನು ತಿನ್ನಲು ಬರುವ ದನಗಳು ರಸ್ತೆ ಮಧ್ಯ ಸಂಚಾರದಟ್ಟಣೆ ಉಂಟುಮಾಡುತ್ತವೆ. ಈ ಬಗ್ಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ವಾಹನ ಸವಾರರು, ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ಜಾನುವಾರುಗಳಿಗೆ ವಾಲೀಕರಿದ್ದರೂ, ರಸ್ತೆಗೆ ಬಿಟ್ಟರೆ, ಇನ್ನ ಅರ್ಧಕ್ಕೆ ವಾಲೀಕರಿಲ್ಲದ ಬಿಡಾಡಿ ಜಾನುವಾರಗಳ ಕಾರುಬಾರು ಎಂಬ ಸ್ಥಿತಿ ಉಂಟಾಗಿದೆ. ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಸೇರಿ ಮತ್ತಿತರ ಕಡೆಗಳಿಂದ ಪ್ರತಿ ವಷರ್ ನೆಡುವ ಬಹುತೇಕ ಸಸಿಗಳನ್ನು ಬಿಡಾಡಿ ದನಗಳು ತಿಂದು ನಾಶಮಾಡುತ್ತಿವೆ. ಆದರೂ ಜಾನುವಾರುಗಳ ಮಾಲೀಕರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಲು ನಗರಸಭೆ ಮುಂದಾಗುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿದೆ.
ರೈತರಿಗೋ, ಗೋಶಾಲೆಗೋ ಹಸ್ತಾಂತರಿಸಿ: ವಾರಸುದಾರರು ಇಲ್ಲದ ಜಾನುವಾರುಗಳನ್ನು ರೈತರಿಗೋ ಅಥವಾ ಗೋಶಾಲೆಗೋ ಹಸ್ತಾಂತರಿಸಿ. ಒಂದು ಕಡೆ ಗೋ ಸಂರಕ್ಷಣೆ. ಮತ್ತೊಂದು ಕಡೆ ಪರಿಸರ ಸಂರಕ್ಷಣೆ, ಇನ್ನೊಂದು ಕಡೆ ಸಂಚಾರ ಸಮಸ್ಯೆಗೆ ಮುಕ್ತಿ ಕಾಣಿಸಬೇಕಾಗಿದೆ. ಕೆಲವೊಮ್ಮೆ ಗೂಳಿಗಳು ಅವಾಂತರ ಸೃಷ್ಟಿಸುವುದು ಸರ್ವೇಸಾವಾನ್ಯವಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ನಾಗರಿಕರ ಮೇಲೆ ದಾಳಿ ವಾಡುವ ಮುಂಚೆ ನಗರಸಭೆ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು ಎಂಬ ಆಗ್ರಹ ಜೋರಿದೆ.
ಜಾನುವಾರುಗಳ ಸಮಸ್ಯೆ ಬಗ್ಗೆ ಪಶುಪಾಲನೆ ಇಲಾಖೆ ಗಮನಕ್ಕೆ ತರಲಾಗುವುದು. ಸಾಕು ಪ್ರಾಣಿಗಳನ್ನು ಸೇರಿ ಜಾನುವಾರಗಳನ್ನು ಯಾವುದೇ ಕಾರಣಕ್ಕೂ ರಸ್ತೆಗೆ ಬಿಡಬಾರದು, ವಾಲೀಕರನ್ನು ಪತ್ತೆಹಚ್ಚಲು ಪಶುಪಾಲನ ಇಲಾಖೆಗೆ ಪತ್ರ ಬರೆದು, ವಾಲೀಕರಿಲ್ಲದ ಜಾನುವಾರಗಳ ಹಾವಳಿ ತಡೆಗೆ ಪರಿಶೀಲಿಸಲಾಗುವುದು. - ವಿ.ಶ್ರೀಧರ್ ಪೌರಾಯುಕ್ತ, ನಗರಸಭೆ, ಮುಳಬಾಗಿಲು ಪಶು ಪಾಲನೆ ಇಲಾಖೆಯಿಂದ ಜಾನುವಾರಗಳ ಗಣತಿ ನಡೆಯುತ್ತಿದೆ. ವಾಲೀಕರು ಇರುವ ಮತ್ತು ವಾಲೀಕರಿಲ್ಲದ ಜಾನುವಾರುಗಳ ಸಂಖ್ಯೆ ಗಮನಿಸಲಾಗುವುದು. ನಗರದಲ್ಲಿ ಯಾವ ವಾರ್ಡ್‌ನಲ್ಲಿ ಎಷ್ಟು ಜಾನುವಾರಗಳಿವೆ? ಎಂಬ ಅಂಕಿಅಂಶ ಸಂಗ್ರಹಿಸಲು ಸರ್ವೇ ನಡೆಯುತ್ತಿದೆ. ಬೀದಿಗೆ ಬರುವ ಜಾನುವಾರುಗಳ ಬಗ್ಗೆ ನಗರಸಭೆಯವರೇ ಕ್ರಮ ಕೈಗೊಳ್ಳಬೇಕು. - ಡಾ. ಅನುರಾಧಾ ಸಹಾಯಕ ನಿರ್ದೇಶಕಿ, ಪಶು ಪಾಲನೆ ಇಲಾಖೆ, ಮುಳಬಾಗಿಲು