ಅಡೆ-ತಡೆ ನಿವಾರಣೆಗೆ ದೇವರ ಮೊರೆ

28 mbl ph 2 A
Published on

ಮುಳಬಾಗಿಲು: ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ನೇತೃತ್ವದ ಕೆ.ಎಚ್. ವಿರೋಧಿ ತಂಡ ಭಾನುವಾರ ಗೌಪ್ಯವಾಗಿ ಕುರುಡಮಲೆ ವಿನಾಯಕ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಂದಿನ ರಾಜಕಾರಣದಲ್ಲಿ ಅಡೆತಡೆಯಾಗದಿರಲಿ ಎಂದು ದೇವರ ಮೊರೆ ಹೋಗಿದೆ.

ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ಅನುದಾನದಲ್ಲಿ ಕುರುಡಮಲೆ ದೇಗುಲದ ಬಳಿ ಶುದ್ಧ ನೀರಿನ ಘಟಕ ನಿರ್ಮಿಸಿದ್ದು, ಅದರ ಉದ್ಘಾಟನೆ ನೆಪದಲ್ಲಿ ಗೌಪ್ಯವಾಗಿ ಕೆ.ಎಚ್. ವಿರೋಧಿ ಪಡೆಯ ಹಾಲಿ ಮತ್ತು ಮಾಜಿ ಶಾಸಕರು ಒಂದೆಡೆ ಸೇರಿದ್ದರು. ಇದರಲ್ಲಿ ಕೋಲಾರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸ್‌ಗೌಡ ಸಹ ಪಾಲ್ಗೊಂಡಿದ್ದರು.

ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಕಾಂಗ್ರೆಸ್ ಎಂಎಲ್‌ಸಿಗಳಾದ ಗೋವಿಂದರಾಜು, ನಸೀರ್ ಅಹ್ಮದ್ ಪಾಲ್ಗೊಂಡು ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ.

ಪೂಜೆ ವ್ಯವಸ್ಥೆಯನ್ನು ಕೊತ್ತೂರು ಆಪ್ತ ಬಳಗದ ಮುಖಂಡರಾದ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ ನೀಲಕಂಠೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್.ರಾಜೇಂದ್ರಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ವಿಶ್ವನಾಥಗೌಡ, ಉತ್ತನೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್ ಮತ್ತಿತರರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಶಕ್ತಿ ಪ್ರದರ್ಶನ: ಮುಳಬಾಗಿಲು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಬಾಸ್‌ಖಾನ್‌ಗೆ ಸೇರಿದ ರಾ.ಹೆ. 75ರ ವಿ.ಗುಟ್ಟಹಳ್ಳಿ ಬಳಿ ಇರುವ ಮಾವಿನ ತೋಟದಲ್ಲಿ ಕೆ.ಎಚ್. ವಿರೋಧಿ ಪಡೆ ಮುಖಂಡರಿಗೆ ಭಾನುವಾರ ಮಧ್ಯಾಹ್ನ ಔತಣಕೂಟ ಏರ್ಪಡಿಸಿದ್ದರು. ಕುಡುಮಲೆಯಿಂದ ಆಗಮಿಸಿದ್ದ ಮುಖಂಡರು ಔತಣ ಸ್ವೀಕರಿಸಿದರು.

ಸಚಿವ ಎಚ್.ನಾಗೇಶ್ ಕಡೆ ಮತ್ತು ಕೆ.ಎಚ್. ಬೆಂಬಲಿತ ಮುಖಂಡರ ಕಡೆ ಕಾಣಿಸಿಕೊಂಡ ಕೆಲ ನಗರಸಭೆ ಸದಸ್ಯರು ಇಲ್ಲಿಯೂ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಇನ್ನೊಂದೆಡೆ ಕುರುಡಮಲೆ ದೇಗುಲದ ಬಳಿ ಶುದ್ಧ ನೀರಿನ ಘಟಕವನ್ನು ಸಚಿವ ಎಚ್.ನಾಗೇಶ್ ಉದ್ಘಾಟಿಸಿದರು.

ಎಂಎಲ್‌ಸಿ ನಸೀರ್ ಅಹ್ಮದ್ ಮತ್ತು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸೇರಿ ಶಾಸಕರು, ಮಾಜಿ ಶಾಸಕರಿಗೆ ಬೆಂಬಲಿಗರು ಔತಣ ಕೂಟ ಏರ್ಪಡಿಸಿದ್ದಾರೆ. ಇದರಲ್ಲಿ ನನ್ನ ಪಾತ್ರ ಇಲ್ಲ. ಜುಲೈ 2ರಂದು ಡಿಕೆಶಿ ಪದಗ್ರಹಣ ನಂತರದ ರಾಜಕೀಯ ನಿರ್ಧಾರ ಪ್ರಕಟಗೊಳ್ಳಿಸುತ್ತೇನೆ. ಷಬಾಸ್‌ಖಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಳಬಾಗಿಲು ಸಚಿವ ಎಚ್.ನಾಗೇ ಪಕ್ಷೇತರ ಶಾಸಕರಾಗಲು, ಬಿಜೆಪಿಯ ಎಸ್.ಮುನಿಸ್ವಾಮಿ ಸಂಸದರಾಗಲು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮತ್ತು ಕಾರ್ಯಕರ್ತರ ಶ್ರಮವಿದೆ. ಆದರೆ ಗೆದ್ದ ನಂತರ ಆದ ಬೆಳವಣಿಗೆಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ. ಎಂ.ಸಿ.ನೀಲಕಂಠೇಗೌಡ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net