ಸುಧಾಕರ ಹೆಗ್ಡೆಗೆ ಮುಕುಟಮಣಿ ಪ್ರಶಸ್ತಿ

Mbd_Mukutamani
Published on

ಮೂಡುಬಿದಿರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಾವಣಗೆರೆಯ ಚನ್ನಗಿರಿ ಸಭಾಭವನದಲ್ಲಿ ನಡೆದ ನಿತ್ಯೋತ್ಸವದಲ್ಲಿ ಮೂಡುಬಿದಿರೆ ಕೋಟೆಬಾಗಿಲಿನ ಸುಧಾಕರ ಹೆಗ್ಡೆ ಅವರಿಗೆ ಉದ್ಯಮ ಕ್ಷೇತ್ರ, ಕಲೆ, ಸಂಘಟನೆ, ಸಮಾಜಸೇವೆ ಗುರುತಿಸಿ ಮುಕುಟಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಯಚೂರು ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಸಂಚಾಲಕ ಅಣ್ಣಪ್ಪ ಮೇಟಿಗೌಡ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿತ್ತು ಅಧ್ಯಕ್ಷ ವಾಮದೇವಪ್ಪ, ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ರಾಜ್ಯ ಸಮಿತಿ ಸಂಸ್ಥಾಪಕ ಗಿರಿಜಾ ಮಾಲಿ ಪಾಟೀಲ್, ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net