ಕೊಪ್ಪಳ ಜೆಜೆಎಂ‌ ಕಾಮಗಾರಿಯಲ್ಲಿ ನೂರಾರು ಕೋಟಿ ಅವ್ಯವಹಾರ : ಭವಾನಿಮಠ ಆರೋಪ

MUKUNDARAO BHAVANIMATH PRESS MEET JJM WORKS INTEROPERATE ALLEGATION
Published on

ಕೊಪ್ಪಳ: ಜಿಲ್ಲೆಯ ಜೆಜೆಎಂ ಯೋಜನೆ ಅನುಷ್ಠಾನದಲ್ಲಿ 500 ಕೋಟಿ ರೂ. ಅಕ್ರಮ ನಡೆದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವೆ. ತಕ್ಷಣ ಸರ್ಕಾರ ಸೂಖ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಮುಕುಂದರಾವ್​ ಭವಾನಿಮಠ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 2020&21 ಮತ್ತು 2021&22ನೇ ಸಾಲಿನಲ್ಲಿ ಮೊದಲು 513 ಹಾಗೂ ಎರಡನೇ ಹಂತದಲ್ಲಿ 213 ಕಾಮಗಾರಿಗಳನ್ನು ನಡೆಸಲಾಗಿದೆ. ಈ ಮೊದಲು ಕೈಗೊಂಡ ಕಾಮಗಾರಿಗಳನ್ನೇ ಈವರೆಗೂ ಪೂರ್ಣಗೊಳಿಸಿಲ್ಲ. ಹಳ್ಳಿಗಳಲ್ಲಿ ಯಾವೊಂದು ಮನೆಗೂ ನೀರು ತಲುಪಿಲ್ಲ.

ಕುಷ್ಟಗಿ, ಯಲಬುರ್ಗಾ ಭಾಗದಲ್ಲಿ ಕೃಷ್ಣಾ ನದಿ ನೀರನ್ನು ಪೂರೈಸಲಾಗುತ್ತಿದೆ. ಉಳಿದಂತೆ ಇತರ ಗ್ರಾಮಗಳಲ್ಲಿ ಜೆಜೆಎಂ ನಳದಲ್ಲಿ ಹನಿ ನೀರು ಬಂದಿಲ್ಲ. ಇಷ್ಟಿದ್ದರೂ ತನಿಖೆ ನಡೆಸದೆ ಜ.9, 2023ರಂದು ಪರಿಷತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಆರೋಪಿಸಿದರು.

ಈ ಕುರಿತು ಮುಖ್ಯ ಕಾರ್ಯದರ್ಶಿ ಸೇರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಅಧಿಕಾರಿಗಳು, ಜಿಪಂ ಸಿಇಒ ಮತ್ತು ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವೆ. ಬಿಜೆಪಿ ಹಾಗೂ ಕಾಂಗ್ರೆಸ್​ ಜನಪ್ರತಿನಿಧಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ.

ಅಧಿಕಾರಿಗಳ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಇದರಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗಿದೆ. ತಕ್ಷಣ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಇಲ್ಲವೇ ಪ್ರತ್ಯೇಕ ತನಿಖಾ ತಂಡ ರಚಿಸಿದಲ್ಲಿ ಅಧಿಕಾರಿಗಳ ಬಣ್ಣ ಬಯಲಾಗಲಿದೆ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net