

ಮುಂಡಗೋಡ: ಪಟ್ಟಣ ಪಂಚಾಯಿತಿಯವರು ಶವ ಸಾಗಾಟಕ್ಕೆ ಅನುಕೂಲವಾಗಲೆಂದು ವ್ಯವಸ್ಥೆ ಮಾಡಿದ್ದ ಮುಕ್ತಿವಾಹನ ಕೆಲ ತಿಂಗಳುಗಳಿಂದ ಕಚೇರಿಯ ಹಿಂಭಾಗದಲ್ಲಿ ಹಾಳಾಗಿ ನಿಂತಿದೆ.
ಸಾಮಾನ್ಯವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸ್ಮಶಾನ (ರುದ್ರಭೂಮಿ) ಗ್ರಾಮದಿಂದ ಎರಡುಕಿಮಿ.ದೂರದಲ್ಲಿವೆ. ಯಾರಾದರೂ ಸಾವನ್ನಪ್ಪಿದರೆ ದೂರದಲ್ಲಿರುವ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕು.ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಶವಸಾಗಾಟಕ್ಕೆ ವಾಹನಗಳನ್ನು ಮಾಡಿರುವುದು ಸಾಮಾನ್ಯವಾಗಿದೆ.
ಅದರಂತೆ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾ ಗಲೆಂದು ಪಟ್ಟಣ ಪಂಚಾಯಿತಿಯವರು ಶವ ಸಾಗಾಟಕ್ಕೆ ಮುಕ್ತಿ ವಾಹನವನ್ನು ಮಾಡಿದ್ದರು ಸರ್ಕಾರಿ ಆಸ್ಪತ್ರೆಯ ಹಳೆಯ ಅಂಬುಲೇನ್ಸನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿದ್ದರು.
ಈ ವಾಹನವನ್ನು ಮುಕ್ತಿವಾಹನವೆಂದು ಹೆಸರಿಸಿ ಶವ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದು ಕೆಲ ತಿಂಗಳು ಕಾಲ ಕಾರ್ಯನಿರ್ವಹಿಸಿದ ಈ ಮುಕ್ತಿ ವಾಹನ ಇದೀಗ ಕೆಲ ತಿಂಗಳಿಂದ ಮೂಲೆ ಸೇರಿದೆ.
ಪಟ್ಟಣ ಪಂಚಾಯಿತಿಯವರು ಮುಕ್ತಿವಾಹನವನ್ನು ದುರಸ್ಥಿ ಪಡಿಸಿ ಶವ ಸಾಗಾಟಕ್ಕೆ ಅನುಕೂಲ ಮಾಡಿ ಕೊಡುವುದು ಅವಶ್ಯವಿದೆ ಎಂಬ ಮಾತು ಸಾರ್ವಜನಿಕರದಾಗಿದೆ.
ಮುಕ್ತಿವಾಹನಕ್ಕೆ ಹದಿನೈದು ವರ್ಷಗಳಾಗಿದ್ದು ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ದುರಸ್ತಿ ಕಾರ್ಯವಿದ್ದು ಆದ್ದರಿಂದ ದುರಸ್ತಿ ಮಾಡಿಸಲು ಸಾದ್ಯವಾಗದ ಕಾರಣ ವಾಹನ ಹಾಗೆ ನಿಂತಿದೆ. ಖಾಸಗಿ ಸಂಸ್ಥೆಯವರು ದುರಸ್ತಿ ಪಡಿಸಿ ಕೊಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.| ಚಂದ್ರಶೇಖರ.ಬಿ. ಮುಖ್ಯಾಧಿಕಾರಿ.ಪಪಂ.