

ಹುಬ್ಬಳ್ಳಿ: ಸಮಸ್ತ ಮರಾಠಾ ಸಮಾಜ ಸೇವಾ ಸಂಘದಿಂದ ಮುಕ್ತಿ ವಾಹನದ ವ್ಯವಸ್ಥೆ ಮಾಡಿದ್ದೇವೆ. ಜ. 23ರಂದು ಬೆಳಗ್ಗೆ 11ಕ್ಕೆ ಲೋಕಾರ್ಪಣೆ ಹಾಗೂ ಶಿವಾಜಿ ಮಹಾರಾಜರ ತಂದೆ ಷಹಾಜಿ ರಾಜೆ ಭೋಸಲೆ ಅವರ ಪುಣ್ಯತಿಥಿ ಆಚರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಸವಂತ ಶಿಂಧೆ ಹಾಗೂ ಉಪಾಧ್ಯಕ್ಷ ದಿನೇಶ ವಾಘ್ಮೋಡೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರ್ಥಿವ ಶರೀರ ಸಾಗಿಸಲು ಮುಕ್ತಿ ವಾಹನ ಸಿದ್ಧಪಡಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಶ್ರೀನಿವಾಸ ಮಾನೆ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ, ಮರಾಠ ಶ್ರೀಭಾರತಿಮಠ ಟ್ರಸ್ಟ್ ಸಮಿತಿ ಅಧ್ಯಕ್ಷ ಸುನೀಲ ದಳವಿ, ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ, ಪ್ರಮುಖರಾದ ಕೇಶವ ಯಾದವ, ವಿಶ್ವಾಸರಾವ್ ಜಾಧವ್ ಇತರರು ಆಗಮಿಸುವರು. ದಯಾನಂದ ಚವ್ಹಾಣ ಅಧ್ಯಕ್ಷತೆ ವಹಿಸುವರು ಎಂದರು.
ನಮ್ಮ ಮರಾಠ ಸಮಾಜವಷ್ಟೇ ಅಲ್ಲ, ಇತರ ಸಮಾಜದವರ ಪಾರ್ಥಿವ ಶರೀರ ಸಾಗಿಸಲು ಈ ವಾಹನ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ಸಂತೋಷ ಖೈರೆ, ನಿರ್ದೇಶಕರಾದ ಶಿವಾಜಿ ಜಾಧವ, ರಾಮಚಂದ್ರ ಯಾದವ ಇತರರು ಉಪಸ್ಥಿತರಿದ್ದರು.