

ಅರಕೇರಾ: ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಜಗದ್ಗುರು ಸಿದ್ಧಾರೂಢರ 190ನೇ ಹಾಗೂ ಗುರುನಾಥರೂಢರ 115ನೇ ಜಯಂತ್ಯುತ್ಸವ ಮತ್ತು ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಜ್ಯೋತಿ ರಥಯಾತ್ರೆಯನ್ನು ಭಕ್ತರು ಗುರುವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಗ್ರಾಮದ ಶಿವ ಸಿದ್ಧಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಹಾಗೂ ಮಾತೋಶ್ರೀ ವಿದ್ಯಾ ತಾಯಿ ಸಾನ್ನಿಧ್ಯದಲ್ಲಿ ರಥಯಾತ್ರೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಪ್ರಮುಖ ಬೀದಿಗಳಲ್ಲಿ ಸಿದ್ಧಾರೂಢರ ಜ್ಯೋತಿ ರಥಯಾತ್ರೆ ಕುಂಭ, ಕಳಸ, ವಾದ್ಯ ಘೋಷಗಳೊಂದಿಗೆ ಸಂಚರಿಸಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.
ಸದ್ಗುರು ಶ್ರೀಮುಕ್ತಾನಂದ ಸ್ವಾಮೀಜಿ ಮಾತನಾಡಿ, ಸಿದ್ಧಾರೂಢರ ಜನ್ಮ ಸ್ಥಳವಾದ ಬೀದರ್ ಜಿಲ್ಲೆಯ ಚಳಕಾಪುರದಲ್ಲಿ ಡಿ.23 ರಂದು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಮತ್ತು ತೀರ್ಥ ಕ್ಷೇತ್ರಗಳಲ್ಲಿ ಸಂಚರಿಸಿ ಫೆ.19 ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ತಲುಪಲಿದೆ ಎಂದರು.
ಪ್ರಮುಖರಾದ ಶರಣಗೌಡ ಮಾಲಿಪಾಟೀಲ್, ಶಾಂತಪ್ಪ ಸಾಹುಕಾರ, ರಾಚಣ್ಣ ಅಬಕಾರಿ, ವೀರೇಶ ಗೌಡ ಮಾಲಿಪಾಟೀಲ್, ಸಿದ್ದಪ್ಪ ದೊರೆ, ಶಿವಣ್ಣ ಮಾಲಿಪಾಟೀಲ್, ಮಹೇಶ ಗೌಡ, ಧರ್ಮಣ್ಣ ಪೂಜಾರಿ, ಸೀತಾರಾಮ ಚವ್ಹಾಣ್, ಜಡೆಪ್ಪ ಸಾಹುಕಾರ ಅದ್ರಿ, ಹಂಪಣ್ಣ ಪಲ್ಲೇದ್, ಆದಪ್ಪ, ಪಂಚಾಕ್ಷರಯ್ಯ ಸ್ವಾಮಿ, ಶಿವಣ್ಣ ದೊರೆ, ಯಂಕೋಬ ನಾಯಕ, ಸೂಗೂರೇಶ ಬಳೆ, ಅರುಣ ಕುಮಾರ ತಿಂಥಿಣಿ, ಮಹಾಂತೇಶ ತಿಂಥಿಣಿ, ದಂಡಪ್ಪ, ಶಿವಪ್ಪ , ಶಿವಕುಮಾರ ದಂಡಗುಂಡ, ಈಶಪ್ಪ ಕ್ವಾಟೆ, ಆಂಜನೇಯ, ಅಯ್ಯಣ್ಣ ಕಟ್ಟಿಮನಿ ಇತರರಿದ್ದರು.