ಮೇಲುಕೋಟೆಯಲ್ಲಿ ಮುಕ್ಕೋಟಿ ದ್ವಾದಶಿ

1
Published on

ಮೇಲುಕೋಟೆ : ಭೂ ವೈಕುಂಠ ಮೇಲುಕೋಟೆಯ ಅದಿದೈವ ಶ್ರೀ ಚೆಲುವ ನಾರಾಯಣಸ್ವಾಮಿಗೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಭಾನುವಾರ ಬಂಗಾರದ ಕವಚಧಾರಣೆ ಮಾಡಿ ಏಲಕ್ಕಿ ಹಾರದಿಂದ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸರತಿಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಧನ್ಯತೆ ಮೆರೆದರು. ಸಾಲಿನಲ್ಲಿ ನಿಂತ ಭಕ್ತರು ಗೋವಿಂದನಾಮದ ಘೋಷದೊಂದಿಗೆ ಸಾಗಿ ಸ್ವಾಮಿಯ ದಿವ್ಯಮಂಗಳ ರೂಪವನ್ನು ದರ್ಶನ ಪಡೆದರು. ಪ್ರಮುಖ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವಿಶೇಷವಾದರೆ ಮೆಲುಕೋಟೆಯಲ್ಲಿ ಸಾಕ್ಷಾತ್ ನಾರಾಯಣನೇ ನೆಲೆಸಿರುವ ಕಾರಣ ಮುಕ್ಕೋಟಿ ದ್ವಾದಶಿ ಆಚರಣೆಯೂ ವಿಶೇಷವಾಗಿ ನೆರವೇರುತ್ತದೆ. ಧನುರ್ಮಾಸದ ಪ್ರಯುಕ್ತ ದೇವಾಲಯದ ಬೆಳಗಿನ ಪೂಜಾಕೈಂಕರ್ಯ ಮುಂಜಾನೆಯೇ ನೆರವೇರಿತು. ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net