

ವಿಜಯಪುರ : ಡಾ. ಶಂಭು ಮೇರವಾಡೆ ರಚಿಸಿದ ಮೂಕನಾಗು ಲು ಕಥಾ ಸಂಕಲನದಲ್ಲಿ ಬದುಕಿನ ಮಗ್ಗಲುಗಳನ್ನು ತೆರೆದಿಡುವ ಕಥೆಗಳಲ್ಲಿ ವ್ಯಂಗ್ಯ, ವಿಡಂಭನೆಗಳು ಪರೋಕ್ಷವಾಗಿ ಬಿಂಬಿತವಾಗಿವೆ ಎಂದು ಚಡಚಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಗಣಗೇರಿ ಹೇಳಿದರು.
ನಗರದ ಐಶ್ವರ್ಯ ನಗರದಲ್ಲಿ ಉದ್ಯಮಿ ನಾಗೇಶ ಶೆಟ್ಟಿ ಅವರ ನಿವಾಸದಲ್ಲಿ ದಿ. ಬಾಬುರಾವ್ ಶೆಟ್ಟಿ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ. ಎಸ್.ಟಿ. ಮೇರವಾಡೆ ರಚಿಸಿದ ಮೂಕನಾಗು ಲು ಕಥಾ ಸಂಕಲನ ಬಿಡುಗಡೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೂಕನಾಗು ಕಥಾ ಸಂಕಲನದಲ್ಲಿ ಮಾನವನ ಬದುಕಿನ ಸ್ಥಿತಿಗತಿಗಳ ಜತೆಗೆ ಮನೋಭಂಡಾರದಲ್ಲಿನ ಪ್ರೀತಿ, ಪ್ರೇಮ, ಕೋಪ, ಸೇಡು, ವಿಶ್ವಾಸ, ನಂಬಿಕೆ, ದ್ವೇಷ, ಅಸೂಯೆ, ಅನುಮಾನ, ಅವಮಾನ, ಹಾಸ್ಯ, ಬೂಟಾಟಿಕೆ ಹಾಗೂ ನಾಟಕೀಯ ಸ್ವಭಾವಗಳ ಅಭಿವ್ಯಕ್ತಿ ಕಾಣುತ್ತೇವೆ ಎಂದರು.
ಮಕ್ಕಳ ಸಾಹಿತಿ ಜಂಬುನಾಥ ಕಂಚಾಣಿ, ಡಾ. ಎಸ್.ಜೆ. ಜಹಾಗೀರದಾರ, ಸಾವಿತ್ರಿ ನಾಟೀಕಾರ, ಡಾ. ಮೀನಾ ಪಾಟೀಲ, ಸಂತೋಷ ಸೂರ್ಯವಂಶಿ, ಡಾ. ಮಹಾದೇವಿ ಸುಂಗಾರೆ, ಪ್ರಜ್ವಲ ಪತ್ತಾರ, ಡಾ. ಸದಾಶಿವ ಪವಾರ ಅವರಿಗೆ ಟ್ರಸ್ಟ್ ವತಿಯಿಂದ ಉದ್ಯಮಿ ನಾಗೇಶ ಶೆಟ್ಟಿ ಸನ್ಮಾನಿಸಿ, ಗೌರವಿಸಿದರು.
ಶ್ರೀನಿಧಿ ಮಾಗಣಗೇರಿ ಪ್ರಾರ್ಥಿಸಿದರು. ಡಾ. ಎಸ್.ಟಿ. ಮೇರವಾಡೆ ವಂದಿಸಿದರು.