ಮೈಸೂರಿನಲ್ಲಿ 'ಮಾವುತ' ಚಿತ್ರಕ್ಕೆ ಮುಹೂರ್ತ

Published on

ಮೈಸೂರು: ಎಸ್‌ಡಿಆರ್ ಪ್ರೊಡಕ್ಷನ್‌ನಿಂದ ನಿರ್ಮಾಣಗೊಳ್ಳುತ್ತಿರುವ ‘ಮಾವುತ’ ಚಿತ್ರದ ಮುಹೂರ್ತ ಅ.30ರಂದು ಅಗ್ರಹಾರದ ಶ್ರೀಮಹಾಗಣಪತಿ ದೇವಸ್ಥಾನದ ಬಳಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಟಿ.ಸುರೇಶ್ ಗೋಲ್ಡ್ ತಿಳಿಸಿದರು.

ಅಂದು ಬೆಳಗ್ಗೆ 9.40ಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಎ.ಮಂಜು, ಶಿಲ್ಪಿ ಅರುಣ್ ಯೋಗಿರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಕ್ಲಾೃಪಿಂಗ್ ಮಾಡಲಿದ್ದಾರೆ. ಮೊದಲ ದೃಶ್ಯವನ್ನು ಸಾಹಸ ನಿರ್ದೇಶಕ ಥ್ರಿಲರ್ ಮಂಜು ನಿರ್ದೇಶನ ಮಾಡಲಿದ್ದು, ಶಾಸಕ ಟಿ.ಎಸ್.ಶ್ರೀವತ್ಸ ಕ್ಯಾಮರಾಗೆ ಚಾಲನೆ ನೀಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದ ನಿರ್ದೇಶಕ ರವಿಶಂಕರ್ ನಾಗ್ ಮಾತನಾಡಿ, ಚಿತ್ರದಲ್ಲಿ ಮಾವುತರು ಹಾಗೂ ಆನೆ ನಡುವಿನ ಬಾಂಧವ್ಯ ಹಾಗೂ ಹಾಡಿಗಳ ಕಷ್ಟ ಸುಖವನ್ನು ತೋರಿಸಲಾಗುತ್ತದೆ ಎಂದರು.

ನಟ ಲಕ್ಷ್ಮೀಪತಿ ಬಾಲಾಜಿ, ಮೈಸೂರು ಮಂಜುಳಾ, ಪ್ರಮೀಳಾ, ಚಿತ್ರ ನಿರ್ಮಾಪಕ ಪಾರ್ಥಸಾರಥಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net