ಸುಂಕದಕಟ್ಟೆ ದೇವಳದಲ್ಲಿ ಕೊಪ್ಪರಿಗೆ ಮುಹೂರ್ತ

New Project (42)
Published on

ಗುರುಪುರ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ದಸರಾ ಮಹೋತ್ಸವದ ಪ್ರಯುಕ್ತ ಸೆ. 22ರಂದು ಬೆಳಗ್ಗೆ 10.30ಕ್ಕೆ ದಿ.ಶ್ರೀ ನಿರಂಜನ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಪೌರೋಹಿತ್ಯದಲ್ಲಿ ಕೊಪ್ಪರಿಗೆ ಮುಹೂರ್ತ ನಡೆಯಿತು.

ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ನಾರಾಯಣ ಎನ್.ಪೂಜಾರಿ, ಆಡಳಿತ ಮಂಡಳಿ ಅಧ್ಯಕ್ಷ ಧ್ರುವ್ ಎನ್.ಪೂಜಾರಿ, ಕಾರ್ಯದರ್ಶಿ ಜ್ಯೋತಿ ಎನ್.ಪೂಜಾರಿ, ಖಜಾಂಚಿ ದೀಪಕ್ ಕೋಟ್ಯಾನ್, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ತಾಪಂ ಮಾಜಿ ಸದಸ್ಯರಾದ ಸುನೀಲ್ ಗಂಜಿಮಠ ಹಾಗೂ ಪವಿತ್ರಾ ಎಸ್, ಪೆರಾರ-ಗಂಜಿಮಠ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಗಣೇಶ್ ಪೂಜಾರಿ ಗಂಜಿಮಠ, ಸಂಘದ ಉಪಾಧ್ಯಕ್ಷ ಸದಾಶಿವ ಪೂಜಾರಿ, ಕೃಷ್ಣಪ್ಪ ಅಮೀನ್ ಸುಂಕದಕಟ್ಟೆ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೆ.22ರಿಂದ ಅಕ್ಟೋಬರ್ 1ರವರೆಗೆ ನಡೆಯಲಿರುವ ಭಜನೆ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net