ಮುಹಿಮ್ಮತ್ ಶಾಲೆಯಿಂದ ಸಹಾಯ

Ksd_school
Published on

ಕಾಸರಗೋಡು: ಪುತ್ತಿಗೆಯ ಮುಹಿಮ್ಮತ್ ಹೈಯರ್ ಸೆಕೆಂಡರಿ ಶಾಲೆ ವತಿಯಿಂದ ವಯನಾಡಿನ ಸಂತ್ರಸ್ತ ಪ್ರದೇಶಗಳಿಗೆ ಮೊದಲ ಹಂತದ ಸಹಾಯವನ್ನು ಗುರುವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಸಿಬ್ಬಂದಿ ಕಾರ್ಯದರ್ಶಿ ಕೆ.ವಿ.ರೇಷ್ಮಾ ನೇತೃತ್ವದಲ್ಲಿ ಶಿಕ್ಷಕರು ಮತ್ತು ಶಿಕ್ಷಕೇತರರನ್ನು ಒಳಗೊಂಡ ಸಿಬ್ಬಂದಿ ಮಂಡಳಿ ಅಕ್ಕಿ, ಆಹಾರ ಧಾನ್ಯಗಳು, ಕುಡಿಯುವ ನೀರು ಇತ್ಯಾದಿಗಳನ್ನು ಒಳಗೊಂಡ ಮೊದಲ ಹಂತದ ನೆರವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತು.

ಪ್ರಾಂಶುಪಾಲ ರೂಪೇಶ್ ಎ.ಟಿ, ಮುಖ್ಯಶಿಕ್ಷಕ ಅಬ್ದುಲ್ ಖಾದರ್, ಸ್ಟಾಫ್ ಕೌನ್ಸಿಲ್ ಸದಸ್ಯರಾದ ಅಹ್ಮದ್ ಸಾದಿಕ್ ಮತ್ತು ಆಸಿಫ್ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಎಂ.ವಿ.ರಾಜೇಶ್ ಅವರಿಗೆ ಸಾಮಗ್ರಿ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net