

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಹೆಜ್ಜೆಮೇಳ ಸ್ಪರ್ಧೆಯನ್ನು ಜು. 30ರಂದು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ
. ಸಾನ್ನಿಧ್ಯವನ್ನು ಮುಳ್ಳೊಳ್ಳಿ ಹಾಗೂ ಬೊಮ್ಮನಹಳ್ಳಿಯ ಶ್ರೀ ಶಿವಯೋಗಿಶ್ವರ ಮಹಾಸ್ವಾಮೀಜಿ, ಕುಂದಗೋಳದ ಕಲ್ಯಾಣಪುರ ಬಸವಣ್ಣಜ್ಜನವರು ವಹಿಸುವರು.
ಶಾಸಕ ಎಂ.ಆರ್. ಪಾಟೀಲ ಉದ್ಘಾಟಿಸಲಿದ್ದು, ಯರಗುಪ್ಪಿ ಗ್ರಾಪಂ ಅಧ್ಯಕ್ಷೆ ರೇಣುಕಾ ದುಂಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ, ಸಿಪಿಐ ಮಾರುತಿ ಗುಳ್ಳಾರಿ, ತಾಪಂ ಇಒ ಡಾ. ಮಹೇಶ ಕುರಿ, ಎಂ.ಎಫ್. ಬನಹಟ್ಟಿ ಭಾಗವಹಿಸಲಿದ್ದಾರೆ.