ಸೌಹಾರ್ದಕ್ಕೆ ಸಾಕ್ಷಿಯಾದ ಮೊಹರಂ

29 smg 4
Published on

ಶಿವಮೊಗ್ಗ: ಹಿಂದು ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಲವೆಡೆ ಹಿಂದುಗಳೂ ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಮುಸ್ಲಿಮರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮೊಹರಂ ಆಚರಿಸಿದರು. ಮಧ್ಯಾಹ್ನದ ನಂತರ ಹೂವು, ಹೊಸ ಬಟ್ಟೆಯಿಂದ ಸಿಂಗರಿಸಿದ ಪಂಜಾ ಮೆರವಣಿಗೆಯನ್ನು ಶಿವಮೊಗ್ಗದ ವಿವಿಧೆಡೆ ನಡೆಸಿದರು. ಕೆಲವರು ಬೆಳಗ್ಗೆಯಿಂದ ಕೇವಲ ಷರಬತ್ ಸೇವಿಸಿ ಉಪವಾಸ ಆಚರಿಸಿದರು. ಇನ್ನೂ ಕೆಲವರು ಧಾರ್ಮಿಕ ಆಚರಣೆಗಳು ಮುಗಿದ ನಂತರ ಭೋಜನ ಸವಿದರು. ಪ್ರಮುಖ ವೃತ್ತ, ರಸ್ತೆ ಬದಿಗಳಲ್ಲಿ ಪಾನಕ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net