

ಕೆರೂರ: ಪಟ್ಟಣದ ವಿವಿಧ ಬಡಾವಣೆ ದರ್ಗಾಗಳಲ್ಲಿ ಹಿಂದು- ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮೊಹರಂ ಹಬ್ಬದ ಪ್ರಯುಕ್ತ ಬೆಳಗ್ಗೆ ದರ್ಗಾಗಳಲ್ಲಿ ದೇವರ ಪಂಜಾ ಹೊತ್ತು ಕೆಂಡವನ್ನು ಹಾಯ್ದು ನಂತರ ಪಟ್ಟಣದಲ್ಲಿ ಭಕ್ತರು ಡೊಲಿ ಹೊತ್ತು ವಿವಿಧ ಕಡೆ ಮೆರವಣಿಗೆ ನಡೆಸಿದರು.
ಮಕ್ಕಳು ಕೈಯಲ್ಲಿ ಸಕ್ಕರೆಯ ತಟ್ಟೆ ಹಿಡಿದು ಪಟ್ಟಣದ ದರ್ಗಾಗಳಿಗೆ ಭೇಟಿ ನೀಡಿ ಸಿಹಿ ಹಂಚಿದರು. ರಿವಾಯತ್ ಪದಗಳ ಮೇಳದಲ್ಲಿ ಪಟ್ಟಣದ ಹಿಂದು- ಮುಸ್ಲಿಮರು ಕೂಡಿ ಹಾಡಿ ಸಂಭ್ರಮಿಸಿದರು.
ಕಿಲ್ಲಾ ಪೇಟೆ, ಚೂರಿ ಓಣಿ, ಮ್ಯಾಗಡಿ ಓಣಿ, ಅಯ್ಯಪ್ಪ ಗುಡಿ, ಬಾರಾ ಇಮಾಮ್, ಅಜಮೀರ್ ಗೈಬಿ, ಎಸ್.ಕೆ.ಆಲೂರ, ಸಣ್ಣ ಗೈಬುಸಾಬ ದರ್ಗಾ ರಿವಾಯತ್ ತಂಡಗಳು ಮೇಳದಲ್ಲಿ ಭಾಗವಹಿಸಿದ್ದವು.