ಮೊಹರಂ ಆಚರಣೆ ಇಂದು

16 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಭಾವೈಕ್ಯದ ಮೊಹರಂ ಆಚರಣೆಯು ಪರಂಪರೆಯಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಜು. 17ರಂದು ಜರುಗಲಿದೆ.
ಗ್ರಾಮದ ಮಸೀದಿಯಲ್ಲಿ 2 ಪಂಜಾಗಳನ್ನು ಸ್ಥಾಪಿಸಿದ್ದು, ಒಂದನ್ನು ಗುತ್ತೇಸಾಬ್​ ಎಂದೂ, ಮತ್ತೊಂದನ್ನು ಕಾಸೀಂದುಲೈಃ ಎಂದು ಸಂಬೋಧಿಸಲಾಗುತ್ತಿದೆ. ಎರಡೂ ದೇವರುಗಳಿಗೂ ಭಕ್ತರು ಬೆಳ್ಳಿಯಿಂದಲೇ ಬಹುದೊಡ್ಡ ಪಂಜಾಗಳನ್ನು ಮಾಡಿಸಿದ್ದಾರೆ. ಗ್ರಾಮದ ಜೈನ್​ ಸಮಾಜದ ಮುಖಂಡ ದಿ. ರಾವಬಹದ್ದೂರ ಪಂಪಾಪತಿ ದೇಸಾಯಿ ಗುತ್ತೇಸಾಬ್​ ಪಂಜಾವನ್ನು ಬೆಳ್ಳಿಯಿಂದ ಮಾಡಿಸಿಕೊಟ್ಟಿದ್ದು ವಿಶೇಷ.
ಮೊಹರಂ ಕೊನೇ ದಿನವಾದ ಜು. 17 ರಂದು ಉಭಯ ಪಂಜಾಗಳನ್ನು ಹೊತ್ತುಕೊಂಡು ಪ್ರಾತಃಕಾಲದಲ್ಲಿ ಅಗ್ನಿಹಾಯುವ ಪ್ರಕ್ರಿಯೆ ನಡೆಯಲಿದೆ. ನಂತರ ಡೋಲಿ ಸಮೇತ ಉಭಯ ಪಂಜಾಗಳು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸುತ್ತವೆ. ಸಂಜೆ ಮತ್ತೆ ಈ ಪಂಜಾಗಳ ಮೆರವಣಿಗೆ ಮೂಲಕ ಹೊಳೆಗೆ ಹೋಗುವ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಹತ್ತಿರದ ಮರೇವಾಡ ಹಾಗೂ ತಿಮ್ಮಾಪುರ ಗ್ರಾಮಗಳ ಪಂಜಾಗಳೂ ಸಮಾವೇಶಗೊಳ್ಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net