ಜು. 5 ರಂದು ಮೊಹರಂ ‘ಆಟವಿ ಖತಾಲ್’

indi 29-1
ಇಂಡಿ ಪಟ್ಟಣದ ಹುಸೇನ ಬಾಷಾ ದೇವರು.
Published on

ಇಂಡಿ: ಪಟ್ಟಣದ ಹಿಂದು- ಮುಸ್ಲಿಂ ಭಾವೈಕ್ಯದ ಮೊಹರಂ ಹಬ್ಬದ ಆಟವಿ ಖತಾಲ್ ಜು. 5 ರಂದು ಶನಿವಾರ ನಡೆಯಲಿದೆ.

ಜು. 4 ರಂದು ಮಧ್ಯಾಹ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಝೂಲ್ ಕೀರ ಮೆರವಣಿಗೆ ನಡೆಯಲಿದೆ.

ಜು. 5 ರಂದು ಆಟವಿ ಖತಾಲ ಮತ್ತು ಜು. 6 ರಂದು ನಗರದ ಪ್ರಮುಖ ಬೀದಿಗಳಲ್ಲಿ ಹಸನ, ಹುಸೇನ ಮತ್ತು ಕಾಸಿಮರ ದೇವರ ಮೆರವಣಿಗೆ ನಡೆಯಲಿದೆ.

ಇಂಡಿಯ ಮೊಹರಂಗೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಹೈದರಾಬಾದ್, ಪುನಾ, ಮುಂಬಯಿ ಸೇರಿ ವಿವಿಧ ಕಡೆಗಳಿಂದ ಭಕ್ತರು ಆಗಮಿಸಲಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಕರಬಲ್ ಮೆರವಣಿಗೆ, ಝೂಲ್ ಕೀರ, ಹುಲಿ ಕುಣಿತ, ಭಡಂಗ ಮೆರವಣಿಗೆ ಸೇರಿ ಅನೇಕ ಗುಂಪುಗಳಿಂದ ತಮ್ಮ ಭಕ್ತ ಸೇವೆ ಸಲ್ಲಿಸುವುದು ಇಲ್ಲಿನ ಮೊಹರಂ ವಿಶೇಷವಾಗಿದೆ.

ಈಗಾಗಲೇ ಪುರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಕಾರ್ಯ ನಡೆದಿದ್ದು, ಪ್ರತಿ ವರ್ಷ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುತ್ತದೆ. ಅದಲ್ಲದೆ ದೇವಸ್ಥಾನದಲ್ಲಿ ಆರು ಮತ್ತು ಹೊರಗಡೆ 20 ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net