ಮಹಮ್ಮದ್ ಪೈಗಂಬರ್ ಆದರ್ಶ ಪಾಲಿಸಿ

Muhammad the prophet ideal policy
ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಗುಳೇದಗುಡ್ಡದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನಡೆಸಿದರು.
Published on

ಗುಳೇದಗುಡ್ಡ: ಪಟ್ಟಣದಲ್ಲಿ ಮುಸ್ಲಿಮರು ಸೋಮವಾರ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್‌ನ್ನು ಶ್ರದ್ಧೆಯಿಂದ ಆಚರಿಸಿದರು.
ಬೆಳಗ್ಗೆ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಅಂಜುಮನ್ ಕಮಿಟಿ ಅಧ್ಯಕ್ಷ ಕೆ.ಆರ್. ರಾಯಚೂರು ಮಾತನಾಡಿ, ಜಗತ್ತಿನ ಜನರಿಗಾಗಿ ಮಹಮ್ಮದ್ ಪೈಗಂಬರ್ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಅವರ ಆದರ್ಶವನ್ನು ಸಾರುವ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್‌ನ್ನು ನಾವೆಲ್ಲ ಶ್ರದ್ಧೆ ಭಕ್ತಿಯಿಂದ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ತರಬೇಕು ಎಂದರು.

ಹಜರತ್ ಮುಪ್ತಿ ಅಬೂಬುಕರ್ ಮೌಲಾನಾ ಆಶೀರ್ವಚನ ನೀಡಿದರು. ಅಂಜುಮನ್ ಕಮಿಟಿ ಅಧ್ಯಕ್ಷ ಕೆ.ಆರ್. ರಾಯಚೂರು, ಉಪಾಧ್ಯಕ್ಷ ಜಮೀರ್ ಮೌಲ್ವಿ, ಕಾರ್ಯದರ್ಶಿ ಎಚ್.ಎಂ. ಸಾಧನಿ, ಡಿಡಿಪಿಐ ಬಿ. ಕೆ. ನಂದನೂರ್, ಮುಬಾರಕ್ ಮಂಗಳೂರ, ರಫೀಕ್ ಕಲ್ಬರ್ಗಿ, ಮೈಬೂಬ್ ಹಣಗಿ, ಕಲೀಲ್ ಕೊತ್ತಲ, ಮುನ್ನಾ ಇಲಕಲ್ಲ, ಜಾಕೀರ್ ಇಲಕಲ್ಲ, ಲಾಲಸಾಬ ಇಲಕಲ್ಲ, ರಂಜಾಪಾಶಾ ಮಕಾಂದಾರ, ಊಮರ ಡಾಲಾಯತ್, ಆಸ್ಿ ಬಕುಂದಿ, ಮುಸ್ತಾಕ್ ಹೊನವಾಡ, ಮೈಬೂಬ್ ಕಾಂಟ್ರಾಕ್ಟರ್, ಮೈಬೂಬ್ ತಹಸೀಲ್ದಾರ್, ಯೂನುಸ್ ಮಾಲದಾರ ಹಾಗೂ ಪಟ್ಟಣದ ಎಲ್ಲ ಮಸೀದಿ ಅಧ್ಯಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net