ಮೂಗೂರಿನಲ್ಲಿ ಶ್ರದ್ಧಾಂಜಲಿ ಸಭೆ-   ಮಾಜಿ ಪ್ರಧಾನಿಗೆ ನಮನ

2
Published on

ಮೂಗೂರು: ಇಲ್ಲಿನ ಶ್ರೀ ವಾಲ್ಮೀಕಿ ಸಮುದಾಯದ ಭವನದಲ್ಲಿ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಗ್ರಾಮದ ಮುಖಂಡರು, ಅಭಿಮಾನಿ ಬಳಗದದಿಂದ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಬಸವರಾಜು ಈ ಸಂದರ್ಭ ಮಾತನಾಡಿ, ಡಾ. ಮನಮೋಹನ್ ಸಿಂಗ್ ಈ ದೇಶಕಂಡ ಆರ್ಥಿಕ ತಜ್ಞ ಎಂದರು. ಬಡತನದಲ್ಲಿ ಹುಟ್ಟಿ ಬೆಳೆದರೂ ಅವರು ಉನ್ನತ ಶಿಕ್ಷಣ ಪಡೆದರು. ಆರ್ಥಿಕ ತಜ್ಞ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸಮರ್ಥವಾಗಿ ಅಧಿಕಾರ ನಿರ್ವಹಿಸಿದರು. ಪ್ರಧಾನಿಯಾಗಿ ರಾಷ್ಟ್ರವನ್ನೂ ಮುನ್ನಡೆಸಿದರು ಎಂದು ಹೇಳಿದರು.

ಭಾರತವು 2 ದಶಕದ ಹಿಂದೆ ಆರ್ಥಿಕವಾಗಿಪ್ರಗತಿ ಸಾಧಿಸುವುದಕ್ಕೆ ಸಿಂಗ್ ಭದ್ರ ಬುನಾದಿ ಹಾಕಿದರು. ಆ ಮೂಲಕ ಜಾಗತಿಕ ಮಟ್ಟದಲ್ಲಿ ದೇಶ ಉತ್ತಮ ಮಟ್ಟಕ್ಕೆ ಏರಲು ಶ್ರಮಿಸಿದರು. ಅವರ ಅವಧಿಯಲ್ಲೇ ಭಾರತ ಮುಕ್ತ ಆರ್ಥಿಕ ನೀತಿಯಿಂದ ಹೊಸ ಹೆಜ್ಜೆ ಇಟ್ಟಿತು. ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವಹಿವಾಟು ನಡೆಸಿ ಗುರುತಿಸಿಕೊಂಡಿತು ಎಂದರು. ಸಿಂಗ್ ರವರು ಜೀವನದ ಉದ್ದಕ್ಕೂ ಪ್ರಾಮಾಣಿಕತೆ ಮತ್ತು ಸರಳತೆ ಪ್ರತಿಬಿಂಬವಾಗಿದ್ದರು. ಅವರ ಆಡಳಿತ ಅವಧಿಯುಲ್ಲಿ ದೇಶ ಎಂದೂ ಹಣಕಾಸು ಸಂಕಷ್ಟಕ್ಕೆ ಗುರಿ ಆಗಲಿಲ್ಲ. ವಿಶ್ವ ಮಟ್ಟದಲ್ಲಿ ದೇಶದ ಘನತೆ- ಗೌರವ ಕಾಪಾಡುವ ದಿಸೆಯಲ್ಲಿ ಸಿಂಗ್ ಕೊಡುಗೆ ಅನನ್ಯ ಎಂದರು.

ಡೇರಿ ಅಧ್ಯಕ್ಷ ಎಂ ಎಂ ಬಸವಣ್ಣ, ವಿವಿಧ ಸಂಘ-ಸಂಸ್ಥೆ ಮುಖಂಡರಾದ ದೇವಾನಂದ, ನಾಗರಾಜು, ಎಂ.ಎಂ. ಜಗದೀಶ, ಸಾಗರ್, ನಾಗೇಂದ್ರ, ಪುಟ್ಟರಾಜು , ಎಂ. ರಾಜು, ಕೃಷ್ಣ ಸ್ವಾಮಿ, ದೀಲಿಪ ಕುಮಾರ, ಕೆಂಚ ನಾಯ್ಕ, ಶಿವಮೂರ್ತಿ, ಮಹಾದೇವ ಸ್ವಾಮಿ, ರಂಗಸ್ವಾಮಿ, ಮರಿಸ್ವಾಮಿ ಇತರರು ಉಪಸ್ಥಿತರಿದ್ದರು.

ಚಿತ್ರ )

ಮೂಗೂರಿನ ಶ್ರೀ ವಾಲ್ಮೀಕಿ ಸಮುದಾಯದ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ದಿ. ಪ್ರಧಾನಿ ಸಿಂಗ್ ಅವರಿಗೆ

ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಬಸವರಾಜು, ಡೇರಿ ಅಧ್ಯಕ್ಷ ಎಂ ಎಂ ಬಸವಣ್ಣ, ವಿವಿಧ ಸಂಘ-ಸಂಸ್ಥೆ ಮುಖಂಡರಾದ ದೇವಾನಂದ, ನಾಗರಾಜು, ಎಂ.ಎಂ. ಜಗದೀಶ, ಸಾಗರ್, ನಾಗೇಂದ್ರ, ಪುಟ್ಟರಾಜು , ಎಂ. ರಾಜು, ಕೃಷ್ಣ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net