ಮೂಗೂರು ಗ್ರಾಪಂ ಉಪಾಧ್ಯಕ್ಷೆ ಭಾಗ್ಯ

ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಭಾಗ್ಯ ಅವರು ಬುಧವಾರ ಅವಿರೋಧವಾಗಿ ಆಯ್ಕೆಗೊಂಡರು. ಎಲ್.ಆರ್.ಮಹದೇವಸ್ವಾಮಿ, ಡಾ.ಎಂ.ರೇವಣ್ಣ, ಜಗದೀಶಮೂರ್ತಿ, ಸಿ.ಎಂ. ಪ್ರಕಾಶ್, ಪೂಜಿತ್ ಮೆಡಿಕಲ್ಸ್ ಕುಮಾರ್, ಎಂ.ಡಿ.ಲೋಕೇಶ್, ಗೌಡ್ರು ಪ್ರಕಾಶ್ ಇತರರಿದ್ದರು.
ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಭಾಗ್ಯ ಅವರು ಬುಧವಾರ ಅವಿರೋಧವಾಗಿ ಆಯ್ಕೆಗೊಂಡರು. ಎಲ್.ಆರ್.ಮಹದೇವಸ್ವಾಮಿ, ಡಾ.ಎಂ.ರೇವಣ್ಣ, ಜಗದೀಶಮೂರ್ತಿ, ಸಿ.ಎಂ. ಪ್ರಕಾಶ್, ಪೂಜಿತ್ ಮೆಡಿಕಲ್ಸ್ ಕುಮಾರ್, ಎಂ.ಡಿ.ಲೋಕೇಶ್, ಗೌಡ್ರು ಪ್ರಕಾಶ್ ಇತರರಿದ್ದರು.
Published on

ತಿ.ನರಸೀಪುರ : ಬಿಜೆಪಿ ಜೆಡಿಎಸ್ ಮೈತ್ರಿಕೂಟ ಪ್ರಾಬಲ್ಯವಿರುವ ತಾಲೂಕಿನ ಮೂಗೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಭಾಗ್ಯ ಅವರು ಬುಧವಾರ ಅವಿರೋಧವಾಗಿ ಆಯ್ಕೆಗೊಂಡರು.

ಹಿಂದಿನ ಉಪಾಧ್ಯಕ್ಷೆ ಶಾಂತಿ ಅವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಕಾವೇರಿ ನೀರಾವರಿ ನಿಗಮದ ಎಇಇ ಎಚ್.ಸಿ.ರತೀಶ್ ಅವಿರೋಧವಾಗಿ ಆಯ್ಕೆಯನ್ನು ಪ್ರಕಟಿಸಿದರು.

24 ಸದಸ್ಯರ ಬಲದ ಪಂಚಾಯಿತಿಯಲ್ಲಿ 14 ಸದಸ್ಯರು ಹಾಜರಿದ್ದು, 11 ಜನ ಗೈರಾಗಿದ್ದರು. ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತೆಯಾಗಿರುವ ಭಾಗ್ಯ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಕ್ಷೇತ್ರದ ಮುಖಂಡರಾದ ಹಿರಿಯ ಶಸ್ತ್ರ ಚಿಕಿತ್ಸಕ ತಜ್ಞ ಡಾ.ಎಂ.ರೇವಣ್ಣ ಸನ್ಮಾನಿಸಿ ಅಭಿನಂದಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯರಾಜ್), ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಕುಮಾರ್, ಪಿಎಸಿಸಿಎಸ್ ಅಧ್ಯಕ್ಷ ಜಗದೀಶಮೂರ್ತಿ, ಗ್ರಾಪಂ ಅಧ್ಯಕ್ಷ ಎಂ.ಡಿ.ಲೋಕೇಶ್, ಪಿಡಿಒ ಪ್ರಕಾಶ್, ತಾಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಗ್ರಾಪಂ ಸದಸ್ಯರಾದ ಶಿವಣ್ಣ, ಚಂದ್ರಮ್ಮ, ರತ್ನಮ್ಮ, ಲಕ್ಷ್ಮಿ, ಸವಿತಾ, ಬಿ.ಎಸ್.ತಂಗಮ್ಮ, ಪುಟ್ಟಮಾದಯ್ಯ, ಎಂ.ಎನ್.ಗಿರೀಶ್, ಎಂ.ಬಿ.ಮಹೇಶ್, ಟಿ.ಎಂ. ಚೇತನ, ಮುಖಂಡರಾದ ಎಂ. ಸಿದ್ದರಾಜು, ಗೌಡ್ರು ಪ್ರಕಾಶ್, ಮಹದೇವಸ್ವಾಮಿ (ಅರವಿಂದ), ಹೊಸಹಳ್ಳಿ ಚಿನ್ನಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net