

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮುಗುಳ್ಯ ಶ್ರೀ ಸುಬ್ರಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಪಂಚಮಿ, ಷಷ್ಠಿ ಪೂಜೋತ್ಸವ ಆಮಂತ್ರಣವನ್ನು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಮಂಗಳವಾರ ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಅರ್ಚಕ ಕೃಷ್ಣ ಭಟ್, ಪ್ರಮುಖರಾದ ವಿಶ್ವಾಸ್, ಸುಪ್ರಭಾ, ಉಮೇಶ್ ರಾವ್, ಶ್ರೀನಿವಾಸ್ ನಾಯ್ಕ, ಪ್ರಸಾದ್ ನಾಯ್ಕ, ಧನೇಶ್ವರ ರಾವ್ ಅಂತರ, ಹರಿಪ್ರಸಾದ್ ಭಂಡಾರಿ, ರವಿರಾಜ್ ಶೆಟ್ಟಿ. ಮೊದಲಾದವರು ಉಪಸ್ಥಿತರಿದ್ದರು.
ಷಷ್ಠಿ ಪೂಜೋತ್ಸವ ಡಿಸೆಂಬರ್ 6 ಮತ್ತು 7ರಂದು ಎರಡು ದಿನ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.