ಮುಗಲಕೊಪ್ಪಗ್ರಾಮದೇವತೆ ಪ್ರಸನ್ನ ಜೋಡೆತ್ತು ಪ್ರಥಮ

4GTL1
Published on

ಗುತ್ತಲ: ಪಟ್ಟಣದ ಹೊರವಲಯದಲ್ಲಿ ಶ್ರೀ ಹೇಮಗಿರಿ ಯುವಕ ಸಂಘದಿಂದ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಹಳಿಯಾಳ ತಾಲೂಕಿನ ಮುಗಲಕೊಪ್ಪ ಗ್ರಾಮದ ಶ್ರೀ ಗಾಮದೇವತೆ ಪ್ರಸನ್ನ ಎತ್ತಿನ ಜೋಡಿ ಪ್ರಥಮ ಸ್ಥಾನ ಗಳಿಸಿ 50 ಸಾವಿರ ರೂ. ಬಹುಮಾನ ಪಡೆಯಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಹೊನ್ನಾಳಿ ಗ್ರಾಮದ ಶ್ರೀ ಉಳವಿ ಚನ್ನಬಸವೇಶ್ವರ ಎತ್ತಿನ ಜೋಡಿ ದ್ವಿತೀಯ ಬಹು ಮಾನ 40 ಸಾವಿರ ರೂ. ಪಡೆಯಿತು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಶ್ರೀ ಗ್ರಾಮದೇವತೆ ಪ್ರಸನ್ನ ಎತ್ತಿನ ಜೋಡಿ ತೃತೀಯ ಬಹುಮಾನ 30 ಸಾವಿರ ರೂ. ಗಳಿಸಿತು.

ಸ್ಪರ್ಧೆಯಲ್ಲಿ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಬಳ್ಳಾರಿ ಮತ್ತಿತರ ಜಿಲ್ಲೆಗಳ ನೂರಾರು ಜೋಡಿ ಎತ್ತುಗಳು ಪಾಲ್ಗೊಂಡಿದ್ದವು. ಸ್ಪರ್ಧೆಗೆ ಕಲ್ಮಠದ ಗುರುಸಿದ್ಧ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಹೇಮಗಿರಿ ಯುವಕ ಸಂಘದ ಅಣ್ಣಪ್ಪ ಸನಾದಿ, ಚಂದ್ರು ಪೂಜಾರ, ಚನ್ನಪ್ಪ ಬನ್ನಿಮಟ್ಟಿ, ಸಂಗೊಳ್ಳಿ ರಾಯಣ್ಣ ಸಂಘ, ಬೀರೇಶ್ವರ ಯುವಕ ಸಂಘದ ಪದಾಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net