ಮುದ್ರಾಧಾರಣೆ, ಅಖಂಡ ಭಜನೆ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಹುನುಮಂತನಗರ ಬಡಾವಣೆಯಲ್ಲಿನ ಶ್ರೀ ಕೃಷ್ಣ, ಶ್ರೀರಾಘವೇಂದ್ರ ಹಾಗೂ ಮಹಾಗಣಪತಿ ದೇವತಾ ಸಮುಚ್ಚಯದಲ್ಲಿ ಜು. 17ರಂದು ಆಷಾಢ ಏಕಾದಶಿ ಪ್ರಯುಕ್ತ ತಪ್ತ ಮುದ್ರಾಧಾರಣೆ ಮತ್ತು ನಾನಾ ಭಜನಾ ಮಂಡಳಿಗಳಿಂದ ಅಖಂಡ ಭಜನೆ ಆಯೋಜಿಸಲಾಗಿದೆ. ಆಸಕ್ತ ಭಜನಾ ಮಂಡಳಿಗಳು ಪಾಲ್ಗೊಳ್ಳಬಹುದು.
ಅಂದು ಬೆಳಗ್ಗೆ 10.30ಕ್ಕೆ ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಂದ ತಪ್ತ ಮುದ್ರಾಧಾರಣೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net