ಜ್ಯೂ.ಉಪೇಂದ್ರ ಖ್ಯಾತಿಯ ಲಕ್ಷ್ಮಣ ಅಂಬಿಗೇರ ಇನ್ನಿಲ್ಲ

MDL 151
Published on

ಮುಧೋಳ: ಜ್ಯೂನಿಯರ್ ಉಪೇಂದ್ರ ಎಂದೇ ಖ್ಯಾತರಾಗಿದ್ದ ನಗರದ ಗಿರಗಾಂವ ಪುನರ್ವಸತಿ ಕೇಂದ್ರದ ನಿವಾಸಿ ಲಕ್ಷ್ಮಣ ಶೇಖಪ್ಪ ಅಂಬಿಗೇರ (31) ಸೋಮವಾರ ಅಕಾಲಿಕವಾಗಿ ನಿಧನರಾದರು. ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.
ಗಿರಗಾಂವ ಪು.ಕೇ.ದಲ್ಲಿ ರೇಣುಕಾದೇವಿ ನಾಟ್ಯ ಸಂಘ ಸ್ಥಾಪನೆ ಜತೆಗೆ ಜೈ ಕರ್ನಾಟಕ ಸಂಸ್ಥೆಯ ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಹಲವಾರು ಕಲಾವಿದರನ್ನು ಪೋಷಿಸಿದ್ದಾರೆ. ಹಲವಾರು ಚಲನಚಿತ್ರಗಳು, ಜೀ ಕನ್ನಡ ವಾಹಿನಿಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net