ಎಸ್‌ಟಿ ಪ್ರಮಾಣ ಪತ್ರಕ್ಕಾಗಿ ಬೃಹತ್ ಪ್ರತಿಭಟನೆ

MDL 11-2
Published on

ಮುಧೋಳ: ತಳವಾರ ಹಾಗೂ ಪರಿವಾರ ಜನಾಂಗಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಬೇಡರ ವೇಷದಲ್ಲಿ ಎರಡೂ ಸಮುದಾಯವರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ತಹಸೀಲ್ದಾರ್ ಸಂಗಮೇಶ ಬಾಡಗಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರು ಮಾತನಾಡಿ, ತಳವಾರ ಮತ್ತು ಪರಿವಾರ ಸಮಾಜದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡದೆ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಸಲಾಗಿದೆ. ಕೇಂದ್ರ ಸರ್ಕಾರದ ಆದೇಶವನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಆದರೆ ರಾಜ್ಯ ಸರ್ಕಾರ ರಾಜಕೀಯ ಹಿತಾಸಕ್ತಿಯಿಂದ ಸಂವಿಧಾನ ವಿರೋಧಿಯಾಗಿ ಇಲ್ಲಿಯವರೆಗೆ ಮೂರು ಸುತ್ತೋಲೆಗಳನ್ನು ಹೊರಡಿಸಿ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಮ್ಮ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಳವಾರ ಸಮುದಾಯದ ಮುಖಂಡರಾದ ಸುರೇಶ ತಳವಾರ, ಶ್ರೀಕಾಂತ ಕೋಳಿ, ಶಂಕರ ತೊರಗಲ್ಲ, ಶಿವಾಜಿ ಮೆಟಗಾರ, ಚಿನ್ನು ಅಂಬಿ, ಭೀಮಸಿ ತಳವಾರ, ಹನುಮಂತ ಉಳ್ಳಾಗಡ್ಡಿ, ವಿದ್ಯಾಧರ ವಾಲಿಕಾರ, ವೆಂಕಟೇಶ ಉಳ್ಳಾಗಡ್ಡಿ, ಪ್ರಕಾಶ ಮುಂಡಗನೂರ, ಸಿಂಧೂರ ತಳವಾರ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net