

ಮುಧೋಳ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ನೂತನ ಅಧ್ಯಕ್ಷರಾಗಿ ಬಾಬು ರಾಮಪ್ಪ ಬರಗಿ, ಉಪಾಧ್ಯಕ್ಷರಾಗಿ ಲಕ್ಕಪ್ಪ ಈರಪ್ಪ ಸೊಕನಾದಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬಾಬು ರಾಮಪ್ಪ ಬರಗಿ, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಕಪ್ಪ ಈರಪ್ಪ ಸೊಕನಾದಗಿ ಇಬ್ಬರೇ ನಾಮಪತ್ರ ಸಲ್ಲಿಸದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಗ್ರಾಮೀಣ ಘಟಕದ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ಗಿರೀಶಗೌಡ ಪಾಟೀಲ, ಅರುಣ ಕಾರಜೋಳ, ಬಿಜೆಪಿ ತಾಲೂಕು ಕಾರ್ಯದರ್ಶಿ ಕುಮಾರ ಹುಲಕುಂದ, ಬಸವರಾಜ ಪಾಟೀಲ(ಮಿರ್ಜಿ), ಗೌಡಣ್ಣ ಪಾಟೀಲ, ಕಲ್ಲಪ್ಪಣ್ಣ ಸಬರದ, ಅನಂತ ಘೋರ್ಪಡೆ, ಚನ್ನಬಸು ಮುತ್ತೂರ, ಮಾರುತಿ ಕರೆನ್ನವರ, ಹನುಮಂತ ತುಳಸಿಗೇರಿ ಇತರರು ಇದ್ದರು.
EndFragment