ಬಿಜೆಪಿ ಬೆಂಬಗರ ಹೆಚ್ಚು ಆಯ್ಕೆ

BKT 19-1
Published on

ಮುಧೋಳ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ನಗರದ ನಡುವಿನ ಕೆರೆಯ ಸೌಂದರ್ಯೀಕರಣ, ದುರಸ್ತಿ ಹಾಗೂ ನಡಿಗೆ ಪಥ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ 22 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಲಿದ್ದಾರೆ. ಜಿಲ್ಲೆಯಲ್ಲಿ 192 ಗ್ರಾಪಂಗಳಲ್ಲಿ 150 ಗ್ರಾಪಂಗಳಲ್ಲಿ ಕಾರ್ಯಕರ್ತರು ಆಯ್ಕೆಯಾಗಲಿದ್ದಾರೆ. ರಾಜ್ಯದ 92 ಸಾವಿರ ಗ್ರಾಪಂ ಸ್ಥಾನಗಳಲ್ಲಿ 70 ಸಾವಿರಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಲಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರ ಜನಪರ ಯೋಜನೆಗಳು ಪ್ರತಿ ಕುಟುಂಬಕ್ಕೂ ಯಾವುದೇ ಮಧ್ಯವರ್ತಿಗಳಿಲ್ಲದೆ ತಲಪುತ್ತಿವೆ ಎಂದರು.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಿ.ಎಚ್. ಪಂಚಗಾಂವಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಗುರುರಾಜ ಕಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ವಸ್ತ್ರದ, ನಗರಸಭೆ ಅಧ್ಯಕ್ಷ ಸಿದ್ಧನಾಥ ಮಾನೆ, ಪುಂಡಲಿಕ ಭೋವಿ, ರಾಜು ಬಿಸರಡ್ಡಿ, ಡಾ.ಸುಮೇದಾ ಮಾನೆ, ನಗರ ಘಟಕದ ಅಧ್ಯಕ್ಷ ಡಾ.ರವಿ ನಂದಗಾಂವಿ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ನಿಂಬಾಳಕರ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ ಹಾಗೂ ನಗರಸಭೆ ಸದಸ್ಯರು ಇದ್ದರು.

ಹಿಂದೊಮ್ಮೆ ಪ್ರಧಾನಿ ರಾಜೀವ್ ಗಾಂಧಿ ಅವರು ಒಂದು ರೂಪಾಯಿ ಅನುದಾನದಲ್ಲಿ ಲಾನುಭವಿಗೆ ಕೇವಲ 15 ಪೈಸೆ ತಲುಪುತ್ತಿದೆ ಎಂದಿದ್ದರು. ಇಂದು ಕಾಲ ಬದಲಾಗಿದೆ. ಮೋದಿ ಅವರ ದಿಟ್ಟ ನಿರ್ಧಾರದಿಂದ ಮಧ್ಯವರ್ತಿ ಇಲ್ಲದೆ ಲಾನುಭವಿಗಳ ಖಾತೆಗೆ ಸಂಪೂರ್ಣ ಹಣ ಜಮಾ ಆಗುತ್ತಿದೆ.
- ಗೋವಿಂದ ಕಾರಜೋಳ, ಡಿಸಿಎಂ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net