ಒಂದೇ ದಿನದಲ್ಲಿ 15 ಲೋಡ್ ಸಾಗಣೆ

MDL NEWS 2-1
Published on

ಮುಧೋಳ: ತಾಲೂಕಿನ ಒಂಟಗೋಡಿ ಗ್ರಾಮದ ರೈತ ಭೀಮಸಿ ಐನಾಪುರ ಅವರ ತೋಟದಲ್ಲಿ ಗ್ರಾಮದ ಕಬ್ಬು ಗ್ಯಾಂಗ್ (ಕಬ್ಬು ಟ್ರಾೃಕ್ಟರ್‌ಗೆ ತುಂಬುವರು)ನವರು ಒಂದೇ ದಿನದಲ್ಲಿ 15 ಲೋಡ್ ಕಬ್ಬು ಸಾಗಣೆ ಮಾಡಿ ದಾಖಲೆ ಮಾಡಿದ್ದಾರೆ. ಅಂದಾಜು 300 ಟನ್‌ಗೂ ಅಧಿಕ ತೂಕ ಬರುವಂತೆ ಟ್ರಾೃಕ್ಟರ್ ಟ್ರೇಲರ್‌ಗೆ ತುಂಬಿದ್ದಾರೆ.

ಕಬ್ಬು ಗ್ಯಾಂಗ್‌ಮನ್ ವೆಂಕಟೇಶ ಬಡೆನ್ನವರ ನೇತೃತ್ವದ ತಂಡದರು ಈ ಸಾಹಸ ಮಾಡಿದ್ದಾರೆ. ಎಲ್ಲ ಗ್ಯಾಂಗ್‌ಮನ್‌ಗಳನ್ನು ರೈತರು ಸನ್ಮಾನಿಸಿ ಪ್ರೋತ್ಸಾಹಸಿದರು.

ನಿರಾಣಿ ಸಕ್ಕರೆ ಕಾರ್ಖಾನೆ ಕೇನ್ ಮ್ಯಾನೇಜರ್ ಜಿ.ಎನ್. ಗಂಗರಡ್ಡಿ, ವಿ.ಆರ್. ನಾಯಿಕ, ವೆಂಕಟೇಶ್ ನಂದೇಶ್ವರ, ಗ್ರಾಮಸ್ಥರಾದ ಶಾಸಪ್ಪ ಉದಗಟ್ಟಿ, ಹನುಮಂತ ಉದಗಟ್ಟಿ, ಶ್ರೀಕಾಂತ ಸಿಂಗರಡ್ಡಿ, ಸದಪ ಗುರಡ್ಡಿ, ಮುದಕಣ್ಣ ಅಂಬಿಗೇರ, ಮಂಜು ಕುರಿ, ರವಿ ಉದಗಟ್ಟಿ, ಹುಲಿಯಪ ಜೋಗಿ, ಭೀಮಸಿ ಬಡೆನ್ನವರ, ಸುರೇಶ್ ಐನಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net