

ಮುಧೋಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಕಾರ್ಯ ಮಾಡುತ್ತಿದೆ. ಇದೇ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 3111ನೇ ಸ್ವಸಹಾಯ ಸಂಘಕ್ಕೆ ಮಂಗಳವಾರ ಚಾಲನೆ ನೀಡಿ, ವಿವಿಧ 1853 ಸಂಘಗಳಿಗೆ 1 ಕೋಟಿ 36 ಲಕ್ಷ ರೂ. ಲಾಭಾಂಶ ವಿತರಿಸಿ ಮಾತನಾಡಿದರು. ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಮಾತನಾಡಿ, ಜಿಲ್ಲೆಯ ಅರ್ಹ 10,579 ಸಂಘಗಳಿಗೆ 8 ಕೋಟಿ 51 ಲಕ್ಷ ರೂ. ಲಾಭಾಂಶ ವಿತರಿಸಲಾಗುತ್ತಿದೆ. ಈ ಯೋಜನೆಯಿಂದ ಸಂಘಗಳು ಉತ್ತಮ ವ್ಯವಹಾರ ಮಾಡುತ್ತಿವೆ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ತಾಲೂಕು ಯೋಜನಾಧಿಕಾರಿ ಧನಂಜಯಕುಮಾರ, ಶ್ರೀಶೈಲಗೌಡ ಪಾಟೀಲ, ಹಣಮಂತ ತುಳಸಿಗೇರಿ, ಶಿವನಗೌಡ ನಾಡಗೌಡ ಇತರರು ಇದ್ದರು.