ಪಕ್ಷ ಸಂಘಟನೆಗೆ ಒಗ್ಗಟ್ಟಾಗೋಣ

MDL 5-1
Published on

ಮುಧೋಳ: ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ತನ್ನದೆಯಾದ ಕಾರ್ಯಕರ್ತರ ಪಡೆ ಹೊಂದಿದೆ. ಕಾಂಗ್ರೆಸ್ ಪಕ್ಷ ಯಾರ ಮನೆಯ ಆಸ್ತಿಯಲ್ಲ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಗ್ರಾಪಂ ಚುನಾವಣೆಯನ್ನು ಯಶಸ್ವಿಗೊಳಿಸೋಣ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಕಿಸಾನ್ ಸೆಲ್ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವ ಸಿದ್ಧತೆ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾಂಗ್ರೆಸ್ ಧುರೀಣ ಸತೀಶ ಬಂಡಿವಡ್ಡರ ಮಾತನಾಡಿ, ಪಕ್ಷದಿಂದ ಎಲ್ಲವನ್ನು ಪಡೆದು ಪಕ್ಷಕ್ಕೆ ಅನ್ಯಾಯ ಮಾಡುವವರನ್ನು ನಿಷ್ಠಾವಂತ ಕಾರ್ಯಕರ್ತರು ಕ್ಷಮಿಸುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರ ಜತೆಗೆ ಹಾಗೂ ಅವರ ಸೇವೆಗಾಗಿ ಕೊನೆಯವರೆಗೂ ನಾನಿದ್ದೇನೆ ಎಂದು ಹೇಳಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ದಯಾನಂದ ಪಾಟೀಲ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಹಿಂದುಳಿದ ವರ್ಗಗಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಶಿನಾಥ ಹುಡೇದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗೋವಿಂದಪ್ಪ ಗುಜ್ಜನ್ನವರ, ಧರೆಪ್ಪ ಸಾಂಗ್ಲೀಕರ, ಸತೀಶ ಮಲಘಾಣ, ಕೃಷ್ಣಪ್ಪ ಕನಕರಡ್ಡಿ, ಯಶವಂತ ಚವ್ಹಾಣ, ಮುತ್ತಪ್ಪ ಗಡ್ಡದವರ, ವೆಂಕಪ್ಪ ಹೊಸಮನಿ, ಸುಧೀರ ಅರಳಿಕಟ್ಟಿ, ಲಕ್ಷ್ಮಣ ಚಿಗರಡ್ಡಿ, ತಿಮ್ಮಣ್ಣ ಹಲಗತ್ತಿ, ರಾಜು ಬೇಪಾರಿ, ದುಂಡಪ್ಪ ಲಿಂಗರಡ್ಡಿ, ಹಣಮಂತ ತೇಲಿ, ಪಾಂಡಪ್ಪ ಕಮಕೇರಿ, ಬಾಬು ಗೋಲಶೆಟ್ಟಿ, ಭೀಮಶಿ ಸರಕಾರಕುರಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net