ರೈತರ ಸೇವೆ ಮಾಡುವೆ

MDL 11-1
Published on

ಮುಧೋಳ: ನಾನು ಎರಡು ಅವಧಿಗಳ ಹಿಂದೆ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಸಹಕಾರಿ ರಂಗದಲ್ಲಿ ರೈತರ ಸೇವೆ ಮಾಡುವ ಅವಕಾಶವಿದ್ದರೂ ಪಕ್ಷ ಸೂಚಿಸುವ ಅಭ್ಯರ್ಥಿಗಳಿಗೆ ನಿರ್ದೇಶಕ ಸ್ಥಾನ ತ್ಯಾಗ ಮಾಡಿದ್ದೇನೆ. ಪ್ರಸ್ತುತ ನಾನು ಅವಿರೋಧವಾಗಿ ಆಯ್ಕೆಯಾಗಿದ್ದು ಪ್ರಾಮಾಣಿಕವಾಗಿ ರೈತರ ಸೇವೆ ಮಾಡುತ್ತೇನೆ ಎಂದು ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ನಂದಕುಮಾರ ಪಾಟೀಲ ಹೇಳಿದರು.

ಟಿ.ಎ.ಪಿ.ಸಿ.ಎಂ.ಎಸ್‌ದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಬುಧವಾರ ನಗರದ ಅವರ ಗೃಹ ಕಚೇರಿಯಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಈ ಗೆಲುವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಾಗೂ ರೈತ ಮುಖಂಡರಿಗೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವಿರೋಧ ಪಕ್ಷಗಳು ನನ್ನ ವಿರುದ್ಧ ಸಾಕಷ್ಟು ಕುತಂತ್ರ ನಡೆಸಿದರೂ ಜಿಲ್ಲೆಯ ಎಲ್ಲ ಟಿ.ಎ.ಪಿ.ಸಿ.ಎಂ.ಎಸ್ ಮತದಾರರು ನನ್ನನ್ನು ಅವಿರೋಧವಾಗಿ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು ನಿರ್ದೇಶಕನಾಗಿ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಿರುವ ಸೇವೆಯನ್ನು ಸಹಕಾರಿ ರಂಗದಲ್ಲಿ ಮಾಡುತ್ತೇನೆ ಎಂದು ಹೇಳಿದರು. ಧರೆಪ್ಪ ಸಾಂಗ್ಲಿಕರ, ಗಿರೀಶ ಲಕ್ಷಾಣಿ, ಸಿದ್ದು ಕೊಣ್ಣೂರ, ರವಿ ಚೌರಡ್ಡಿ, ಪ್ರವೀಣ ತುಗಲಟ್ಟಿ, ಅಜಿತ ಪಾಟೀಲ ಹಾಗೂ ಈಶ್ವರ ಮಠಪತಿ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net