ಧಾರವಾಡ ಮಹಿಳಾ, ಮುಧೋಳ ಪುರುಷರ ತಂಡಗಳಿಗೆ ಪ್ರಶಸ್ತಿ

MDL NEWS 18-1
Published on

ಮುಧೋಳ: ನಗರದ ಇಂಗಳಗಿ ರಸ್ತೆಯ ಅರಳಿಕಟ್ಟಿ ಮೈದಾನದಲ್ಲಿ ಅರಳಿ ಕಟ್ಟಿ ಫೌಂಡೇಷನ್ ಆಶ್ರಯದಲ್ಲಿ ಸೋಮವಾರ ನಡೆದ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಮುಕ್ತ ವಾಲಿಬಾಲ್ ಕ್ರೀಡಾಕೂಟದಲ್ಲಿ ಧಾರವಾಡದ ಚನ್ನಮ್ಮ ಸ್ಪೋರ್ಟ್ಸ್ ಮಹಿಳಾ ತಂಡ, ಮುಧೋಳದ ಅರಳಿಕಟ್ಟಿ ಸ್ಪೋರ್ಟ್ಸ್ ಕ್ಲಬ್ ತಂಡ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡವು.

ಮಹಿಳಾ ತಂಡಗಳ ಫಲಿತಾಂಶ: ಧಾರವಾಡದ ಚನ್ನಮ್ಮ ಸ್ಪೋರ್ಟ್ಸ್ ಮಹಿಳಾ ತಂಡ ಬೆಳಗಾವಿಯ ಶಿವಬಸವ ಸ್ಟೋರ್ಟ್ಸ್ ಕ್ಲಬ್ ತಂಡವನ್ನು 25-18, 19-25, 15-11 ಸೆಟ್‌ನಲ್ಲಿ ಸೋಲಿಸಿ ಪ್ರಥಮ ಸ್ಥಾನ ಗಳಿಸಿತು. ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮೀ ಸ್ಪೋರ್ಟ್ಸ್ ಕ್ಲಬ್ ತೃತೀಯ, ಮಂಗಳೂರಿನ ಮಂಗಳಾ ಸ್ಪೋರ್ಟ್ಸ್ ಕ್ಲಬ್ ಚತುರ್ಥ ಸ್ಥಾನ ಪಡೆದವು.

ಪುರುಷ ತಂಡಗಳ ಫಲಿತಾಂಶ: ಮುಧೋಳ ಅರಳಿಕಟ್ಟಿ ಸ್ಪೋರ್ಟ್ಸ್ ಕ್ಲಬ್ ತಂಡ ಮಹಾಲಿಂಗಪುರದ ಯೂತ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 22-25, 20-25, 10-15 ಸೆಟ್‌ನಲ್ಲಿ ಸೋಲಿಸಿ ಪ್ರಥಮ ಬಹುಮಾನ ಪಡೆಯಿತು. ಹುಬ್ಬಳ್ಳಿಯ ಸಿಟಿ ಸ್ಪೋರ್ಟ್ಸ್ ಕ್ಲಬ್ ತೃತೀಯ, ಮಹಾರಾಷ್ಟ್ರದ ಸಾಂಗ್ಲಿಯ ಫ್ರೇಂಡ್ಸ್ ಸ್ಪೋರ್ಟ್ಸ್ ಕ್ಲಬ್ ಚತುರ್ಥ ಸ್ಥಾನ ಪಡೆದವು.

12 ಮಹಿಳಾ, 18 ಪುರುಷ ತಂಡಗಳು ಭಾಗವಹಿಸಿದ್ದವು. ಪಂದ್ಯಗಳ ಮಧ್ಯೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಸ್ವಾಗತ ಸಮಿತಿ ಅಧ್ಯಕ್ಷ, ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಕಾರ್ಯಾಧ್ಯಕ್ಷ ಗಿರೀಶಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ಅರಳಿಕಟ್ಟಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ ಸೇರಿ ಹಲವಾರು ಗಣ್ಯರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net