ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಪ್ರೋತ್ಸಾಹಿಸಿ

Untitled design (5)
ಮುದಗಲ್‌ನ ಡಾ.ಎಸ್‌ಬಿ.ಭಮಸಾಗರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮುದಗಲ್ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಬಾಲಚಂದ್ರ ದಾಸರ್ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಪ್ರಮುಖರಾದ ವಾಣಿಶ್ರೀ, ಮಲ್ಲಿಕಾರ್ಜುನ ಗೌಡೂರು, ಎ.ಆರ್.ಹವಾಲ್ದಾರ್ ಇನ್ನಿತರರಿದ್ದರು.
Published on

ಮುದಗಲ್: ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದೆ ಎಂದು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಚಂದ್ರ ದಾಸರ ಹೇಳಿದರು.

ತೀರ್ಪುಗಾರರು ವಿದ್ಯಾರ್ಥಿಗಳಿಗೆ ನ್ಯಾಯ ನೀಡಲಿ

ಪಟ್ಟಣದ ಡಾ.ಎಸ್.ಬಿ.ಭಮಸಾಗರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಮ್ಮಿಕೊಂಡಿದ್ದ ಮುದಗಲ್ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.ತೀರ್ಪುಗಾರರು ನ್ಯಾಯ ನೀಡುವ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕಸಾಪ ಲಿಂಗಸುಗೂರು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ಪುರಸ್ಕಾರ ದೊರೆಯಬೇಕು ಎಂದರು.
ವಿದ್ಯಾರ್ಥಿಗಳು ವಿವಿಧ ನಾಯಕರ ಹಾಗೂ ಮಹಾತ್ಮರ ವೇಷಭೂಷಣದಲ್ಲಿ ಗಮನ ಸೆಳೆದರು. ನೀತಾ ಎಸ್.ಭಮ್ಮಸಾಗರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯೆ ಜಯಶ್ರೀ ಶಂಕ್ರಪ್ಪ ಜೀಡಿ, ಮಲ್ಲಪ್ಪ ದೇವದುರ್ಗ,ಶಿವರಾಜ ಕಟ್ಟಿಮನಿ, ಸಿಆರ್‌ಪಿ.ಗಳಾದ ರಾಮಚಂದ್ರ ಢವಳಗಿ, ಶರಣಪ್ಪ, ಬಿಆರ್‌ಪಿ.ನಾಗರಾಜ, ಎ.ಆರ್.ಹವಾಲ್ದಾರ್, ಗಂಗಾಧರಯ್ಯ, ಸಂಗಯ್ಯ ಹಿರೇಮಠ, ವಾಣಿಶ್ರೀ, ಪ್ರಭುಲಿಂಗ ಗದ್ದಿ, ಹನುಮಯ್ಯ ಸಾಲಿಮನಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net