ಮೊಳಕೆ ಕಾಳುಗಳನ್ನು ಸೇವಿಸಿ

Untitled design (2)
ವ್ಯಾಕರನಾಳ ಗ್ರಾಮದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಮುಖರಾದ ರವಿರಾಜ್, ಗುರುದೇವಿ ಹಿರೇಮಠ, ಅಯ್ಯಮ್ಮ ಹಿರೇಮಠ, ದೇವಮ್ಮ ಇದ್ದರು.
Published on

ಮುದಗಲ್: ಗರ್ಭಿಣಿಯರು ಮತ್ತು ಬಾಣಂತಿಯರು ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡಬೇಕೆಂದು ಮಾಕಾಪೂರ ಬಿ. ವಲಯದ ಮೇಲ್ವಚಾರಕಿ ಹೇಮಾ ದೇವನಾಳ ಹೇಳಿದರು.

ತಾಲೂಕಿನ ವ್ಯಾಕರನಾಳ ಗ್ರಾಮದಲ್ಲಿ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಲಿಂಗಸುಗೂರು ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಸೊಪ್ಪು, ತರಕಾರಿ, ಹಣ್ಣು ಹಂಪಲುಗಳನ್ನು ತಿನ್ನಬೇಕು. ಅಲ್ಲದೆ ಮೊಳಕೆ ಕಾಳುಗಳನ್ನು ಸೇವನೆ ಮಾಡಬೇಕು ಎಂದು ತಿಳಿಸಿದರು.

ನಾಗಲಾಪೂರ ಆರೋಗ್ಯ ಅಧಿಕಾರಿ ರವಿರಾಜ್, ಅಂಗನವಾಡಿ ಕಾರ್ಯಕರ್ತೆಯರಾದ ಗುರುದೇವಿ ಹಿರೇಮಠ, ಅಯ್ಯಮ್ಮ ಹಿರೇಮಠ, ದೇವಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net