

ಮುದಗಲ್: ಜನ ಸಾಮಾನ್ಯರ ದಿನನಿತ್ಯ ಬಳಕೆಗೆ ಬೇಕಾದ ಬಹುತೇಕ ತರಕಾರಿಗಳ ಬೆಲೆ ನೂರೂ ರೂಪಾಯಿ ಆಸು-ಪಾಸು ತಲುಪಿದೆ.
ಕಳೆದ ವಾರ ಒಂದು ಕೆಜಿ ಟ್ಯೋಮೆಟೊ ಬೆಲೆ ನಲವತ್ತು ರೂ.ಇತ್ತು. ಈಗ ಅದು ಏಕಾಎಕಿ 100 ರಿಂದ 120 ರೂ. ತಲುಪಿದೆ. ಇದರ ಜತೆ ಆಲುಗಡ್ಡೆ, ಈರುಳ್ಳಿ, ಸೌತೆಕಾಯಿ, ಬದನೆಕಾಯಿ, ಚಳ್ಳಂಬರಿ, ಹೂಕೋಸು, ಬೀಟ್‌ರೂಟ್, ಕ್ಯಾರೇಟ್ ಬೆಲೆ ಕೆಜಿಗೆ 60 ರಿಂದ 80 ರೂ.ಮಾರಟವಾಗುತ್ತಿದೆ. ಡಬ್ಬುಮೆಣಸಿನಕಾಯಿ ಬೆಲೆ 80 ರಿಂದ 100 ರೂ.ವರೆಗೂ ಇದೆ.
ಈ ವರ್ಷ ವಿಪರೀತ ಮಳೆಗೆ ಹೆದರಿ ರೈತರು ತರಕಾರಿ ಬೆಳೆದಿಲ್ಲ. ಸಜ್ಜೆ, ತೊಗರಿ, ಸೂರ್ಯಕಾಂತಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬಿತ್ತಿದ್ದಾರೆ. ಇದರಿಂದಾಗಿ ಹೊರ ಜಿಲ್ಲೆಗಳಿಂದ ತರಕಾರಿ ತರುವ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಬೆಲೆ ದುಬಾರಿಯಾಗಿದೆ. ಒಟ್ಟಾರೆಯಾಗಿ ಗ್ರಾಹಕರ ಪಾಲಿಗೆ ಮಾತ್ರ ಜೇಬಿಗೆ ಭಾರವಾಗುತ್ತಿದೆ.