

ಮುದಗಲ್: ಪಟ್ಟಣ ಸಮೀಪದ ಉಪ್ಪಾರನಂದಿಹಾಳ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ರಾಯಚೂರು, ಲಿಂಗಸುಗೂರಿನ ತಾಲೂಕು ಪಂಚಾಯಿತಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಬುಧವಾರ ಹಮ್ಮಿಕೊಂಡಿದ್ದವು.
ಸಭೆಯನ್ನು ಗ್ರಾಪಂ ಅಧ್ಯಕ್ಷೆ ಶಾಂತಾ ಹನುಮಂತ ಉದ್ಘಾಟಿಸಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಕುಡಿಯುವ ನೀರು, ಮಕ್ಕಳಿಗೆ ಶೌಚಗೃಹ ಆಟದ ಮೈದಾನ ಸೆರಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಪಿಡಿಒ ನಜೀರಸಾಬ ಮಾತನಾಡಿದರು. ಸದಸ್ಯರಾದ ಶಿವಕುಮಾರ ಕಮ್ಮಾರ, ಶಿವರಾಯಪ್ಪಗೌಡ ಗುಡಸಾಬ ಗುರಿಕಾರ, ಕಾರ್ಯದರ್ಶಿ ಮಹಾದೇವಪ್ಪ, ಮುಖ್ಯ ಶಿಕ್ಷಕ ಮಲ್ಲಪ್ಪ, ಸಹಶಿಕ್ಷಕ ಶ್ರೀಕಾಂತ ಹಿರೇಮಠ, ಹಸನ್ ಅಂಗಡಿ, ಅಮರೇಶ ಕಮ್ಮಾರ ಇತರರಿದ್ದರು.