

ಮುದಗಲ್: ಉಳಿಮೇಶ್ವರದಲ್ಲಿ ಭೋವಿ ಸಮುದಾಯದ ಆರಾಧ್ಯ ದೈವ ಸತ್ಯಮ್ಮ ದೇವಿ ದೇವಸ್ಥಾನ ಮತ್ತು ಮೂರ್ತಿ ಪ್ರತಿಷ್ಠಾನ ಅದ್ದೂರಿಯಾಗಿ ಮಂಗಳವಾರ ಜರುಗಿತು.
ಕಳೆದ ಎರಡು ದಿನಗಳಿಂದ ಹಿಮಾಲಯ ಪೀಠಾಧೀಶ್ವರ ಶ್ರೀ1008 ಅನಂತ ವಿಭೂಷಣ ಮಹಾಂಡಲೇಶ್ವರ ಶಿವಾಂಗಿನಂದ ಗಿರಿಯ ಮಹಾರಾಜರ ನೇತೃತ್ವದಲ್ಲಿ ಸಚ್ಛ ಚಂಡಿಯಾಗ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸತ್ಯಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಮಹರಾಷ್ಟ್ರದ ಇಪ್ಪತ್ತಕ್ಕೂ ಅಧಿಕ ಯಾಗ ಪಂಡಿತರು ಭಾಗವಹಿಸಿದ್ದರು. ಇದಕ್ಕೂ ಮುಂಚೆ ಗ್ರಾಮ ದೇವತೆಯ ದೇವಸ್ಥಾನವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಉದ್ಘಾಟಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಮುಖರಾದ ಸಿದ್ದು ಬಂಡಿ, ಸತ್ಯಪ್ಪ ನೀರಾವರಿ, ಸತೀಶ ಭೋವಿ, ರಾಮಣ್ಣ ವ್ಯಾಸನಂದಿಹಾಳ, ಶರಣಪ್ಪ ವಡ್ಡರ್, ಹನುಮಂತ ನೀರಾವರಿ, ಸತ್ಯಪ್ಪ, ಸಣ್ಣ ಯಂಕಪ್ಪ, ದುರಗಪ್ಪ ಸೇರಿ ಇತರರಿದ್ದರು.