ಮುದಗಲ್ ಕೋಟೆಗೆ ವಾಸ್ತುಶಿಲ್ಪಿ ಭೇಟಿ

25 MDL 02
ಮುದಗಲ್ ಐತಿಹಾಸಿಕ ಎರಡು ಸುತ್ತಿನ ಕೋಟೆ ಶಿಥಿಲಾವಸ್ಥೆಯ ಸ್ಥಿತಿಗತಿಗಳ ಬಗ್ಗೆ ವರದಿ ಸಿದ್ಧಪಡಿಸಲು ಕೋಟೆ ಸಂರಕ್ಷಣಾ ವಾಸ್ತು ಶಿಲ್ಪಿ ವಿಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಸದಸ್ಯ ಮೈಬೂಬ್ ಸಾಬ್ ಇದ್ದರು.
Published on

ಮುದಗಲ್: ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆಯ ಸ್ಥಿತಿಗತಿ ತಿಳಿಯಲು ವಾಸ್ತು ಶಿಲ್ಪಿ ವಿಜಯಕುಮಾರ್ ಬಳ್ಳಾರಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಇವರು ಶಿಥಿಲಾವಸ್ಥೆಯ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಮೊದಲ ಹಂತದ ಡಿ.ಪಿ.ಆರ್ ಸಲ್ಲಿಸಲಿದ್ದಾರೆ.

ರಾಜ್ಯ ಪುರಾತತ್ವ ಇಲಾಖೆ ನಿರ್ದೇಶನದಂತೆ ಕೋಟೆಯ ಶಿಥಿಲಾವಸ್ಥೆಯ ಸ್ಥಿತಿಗತಿಗಳನ್ನು ಗುರುತಿಸಿ ದುರಸ್ತಿ ಕಾರ್ಯ ಹಾಗೂ ಕೋಟೆ, ಶಿಲಾ ಶಾಸನಗಳ ಸಂರಕ್ಷಣೆಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಎರಡು-ಮೂರು ಹಂತಗಳಲ್ಲಿ ಕೋಟೆಯ ಹೊರಭಾಗ, ಒಳಭಾಗಗಳ ಚಿತ್ರಣ ಮತ್ತು ವರದಿ ಸಿದ್ಧಪಡಿಸಿ ರಾಜ್ಯ ಪುರಾತತ್ವ ಇಲಾಖೆಗೆ ಮುಂದಿನ ಕ್ರಮ ಕೈಗೊಳ್ಳಲು ತಿಳಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net