ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮ ಆರಾಧನಾ ಮಹೋತ್ಸವ ರದ್ದು

08022021 Mudagal Turadagi Timmamma
Published on

ಮುದಗಲ್: ಸಮೀಪದ ತುರಡಗಿ (ಅಮ್ಮನ ಕಟ್ಟೆ)ಯಲ್ಲಿನ ಸಾಧ್ವಿ ಶಿರೋಮಣಿ ತಿಮ್ಮಮ್ಮನವರ ಆರಾಧನಾ ಮಹೋತ್ಸವನ್ನು ಈ ವರ್ಷ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿ ಜನ ಸೇರುವುದನ್ನು ರದ್ದು ಮಾಡಲಾಗಿದೆ ಎಂದು ವಿಶ್ವಸ್ಥ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.

ರಾಜ್ಯಾದ್ಯಂತ ಇರುವ ತಿಮ್ಮಮ್ಮನವರ ಭಕ್ತರು ತಮ್ಮ ಮನೆಯಲ್ಲಿಯೇ ಆರಾಧನೆ ನೆರವೇರಿಸುವ ಮೂಲಕ ತಾಯಿ ಕೃಪೆಗೆ ಪಾತ್ರರಾಗಬೇಕು. ಮಹೋತ್ಸವ ಸಂದರ್ಭ ಅಂಗಡಿ ಮುಂಗಟ್ಟುಗಳಿಗೆ ಅವಕಾಶವಿಲ್ಲ. ಗರ್ಭಗುಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೆ ಅಡಚಣೆಯಿಲ್ಲ ಎಂದು ಸಮಿತಿ ಉಪಾಧ್ಯಕ್ಷ ಹನುಮೇಶ ಪಟವಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net