ಮೂರು ರಾಯರ ಜಾತ್ರೆ ಸಂಪನ್ನ

Mudgal Three Raya Jatra
ಮುದಗಲ್‌ನಲ್ಲಿ ಕ್ರೈಸ್ತರು ಮೂರು ರಾಯರ ಜಾತ್ರೆ ನಿಮಿತ್ತ ಕ್ರಿಸ್ತನ ಮೂರ್ತಿಯನ್ನು ಮೆರವಣಿಗೆ ಮಾಡಿದರು.
Published on

ಮುದಗಲ್: ಪಟ್ಟಣದ ಪವಿತ್ರ ಹೃದಯ ದೇವಾಲಯದಲ್ಲಿ ಮಂಗಳವಾರ ಮೂರು ರಾಯರ ಜಾತ್ರೆಯನ್ನು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಳಿಸಲಾಯಿತು. ಜಾತ್ರೆ ನಿಮಿತ್ತ ಫಾದರ್ ಸುನೀಲ್ ನೇತ್ರತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಮೂರು ರಾಯರ ಜಾತ್ರೆ ವಿಶೇಷತೆ ಬಗ್ಗೆ ತಿಳಿಸಲಾಯಿತು. ನಂತರ ಅಲಂಕೃತ ವಾಹನದಲ್ಲಿ ಯೇಸು ಕ್ರಿಸ್ತನ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಕೆ.ಮರಿಯಮ್ಮನ ಹಳ್ಳಿ, ಕಡದರಾಳ ಸೇರಿದಂತೆ ಜಾಂತಾಪೂರ ಗ್ರಾಮದ ಯುವಕರು ಭಜನಾ ಹಾಡುಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net