ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ

mdl-1
ಮಹಾಂತ ಸ್ವಾಮೀಜಿ ಸಾಲಿಮಠ
Published on

ಮುದಗಲ್: ಇತಿಹಾಸ ಪುರುಷರ, ಸಂತ-ಶರಣರ ಹಾಗೂ ಅನುಭಾವಿಗಳ ವಚನಾಮೃತಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಕರೆ ನೀಡಿದರು.

ಸಮೀಪದ ತಿಮ್ಮಾಪುರ ಕಲ್ಯಾಣಾಶ್ರಮದಲ್ಲಿ ಜನ ಮನ ಕಲ್ಯಾಣ ಜಾತ್ರೆ ನಿಮಿತ್ತ ಶರಣರ ಜೀವನ ದರ್ಶನ ಪ್ರವಚನದಲ್ಲಿ ಬುಧವಾರ ಮಾತನಾಡಿದರು.

ಆಧುನಿಕ ಭರಾಟೆಯಲ್ಲಿ ಶರಣರ, ಸಂತರ ವಚನ, ಸಂಸ್ಕಾರಗಳು ಮರೆಯಾಗುತ್ತಿವೆ. ಇಂದಿನ ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ಬಿಟ್ಟು, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೊಬೈಲ್‌ನಿಂದ ದೂರ ಉಳಿಯಲು ಪುಸ್ತಕಗಳನ್ನು ನೀಡಿ. ಜನ ಮನ ಕಲ್ಯಾಣ ಜಾತ್ರೆ ಅಂಗವಾಗಿ ಐದು ದಿನ ಶರಣರ ಜೀವನ ದರ್ಶನ ಪ್ರವಚನ, 23 ರಂದು ಜಾತ್ರಾ ಮಹೋತ್ಸವ ಜರುಗಲಿದೆ ಹಾಗೂ ನಾಡಿನ ಹರ ಗುರು ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ವಚನ ಕಟ್ಟಿನ ಪಲ್ಲಕ್ಕಿ ಮಹೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸೇರಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net