ಅಪರಾಧಿಗಳಿಗೆ ಕಠೋರ ಶಿಕ್ಷೆ ನೀಡಲಿ

ಮುದಗಲ್‌ನಲ್ಲಿ ತೆಹ್ರಿಕ್ ಇ ಟಿಪ್ಪು ಸುಲ್ತಾನ್ ಸಂಘದಿಂದ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು. ಸಂಘದ ಹೋಬಳಿ ಘಟಕ ಅಧ್ಯಕ್ಷ ಮಹೆಬೂಬ್ ಬುಲೆಟ್, ಪ್ರಮುಖರಾದ ನಾಸೀರ್ ಪಾಷಾ, ಸಲೀಮ್ ಹಫೀಜ್ ಅಸ್ಲಾಂ ಯಾಕೂಬ್ ವಾಸಿಮ್, ಕಾಸೀಂ ಬುಡ್ಡ ಸಮೀರ್, ಶಬ್ಬೀರ್, ಮೆಹಬೂಬ್, ರಹಿಮ್ ಷಾ ಮಕಾನದಾರ್ ಇದ್ದರು.

Published on

ಮುದಗಲ್: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ತೆಹ್ರಿಕ್ ಇ ಟಿಪ್ಪು ಸುಲ್ತಾನ್ ಸಂಘ ಹೋಬಳಿ ಘಟಕದಿಂದ ಮೋಂಬತ್ತಿ ಹಿಡಿದು ಶುಕ್ರವಾರ ರಾತ್ರಿ ಮೌನ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಛಾವಡಿ ಕಟ್ಟೆ, ಸಂತೆ ಬಜಾರ್, ಮಸ್ಕಿ ರಸ್ತೆ ಮಾರ್ಗವಾಗಿ ಡಾ. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್‌ಡಿಪಿಐ ಗ್ರಾಮೀಣ ಜಿಲ್ಲಾಧ್ಯಕ್ಷ ಎಂ.ಡಿ.ರಫಿ ಖಾಜಿ ಮಾತನಾಡಿ, ಪಹಲ್ಗಾಮ್ ಭಯೋತ್ಪಾದನಾ ಕೃತ್ಯವನ್ನು ನಾವು ಖಂಡಿಸುತ್ತಿದ್ದೇವೆ. ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆಯಾಗಬೇಕು. ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಹೋಬಳಿ ಘಟಕ ಅಧ್ಯಕ್ಷ ಮಹೆಬೂಬ್ ಬುಲೆಟ್, ಪ್ರಮುಖರಾದ ನಾಸೀರ್ ಪಾಷಾ, ಸಲೀಮ್ ಹಫೀಜ್ ಅಸ್ಲಾಂ ಯಾಕೂಬ್ ವಾಸಿಮ್, ಕಾಸೀಂ ಬುಡ್ಡ ಸಮೀರ್, ಶಬ್ಬೀರ್, ಮೆಹಬೂಬ್, ರಹಿಮ್ ಷಾ ಮಕಾನದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net