ಗೊಲ್ಲರಹಟ್ಟಿ ಮತ್ತು ಹಡಗಲಿಯಲ್ಲಿ ನೀರಿನ ಸಮಸ್ಯೆ ಉಲ್ಬಣ

UNTILETED 06
Published on

ಮುದಗಲ್: ಪಟ್ಟಣ ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯ ಹಡಗಲಿ ಮತ್ತು ಸೋಂಪೂರ ಗೊಲ್ಲರಹಟ್ಟಿ ಸೇರಿ ಹಲವಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.

ಸೋಂಪೂರ ಗೊಲ್ಲರಹಟ್ಟಿಯಲ್ಲಿ ಆರು ತಿಂಗಳಿಂದ ಅಂತರ್ಜಲ ಕುಸಿತದಿಂದ ಬೋರವೆಲ್‌ನಲ್ಲಿ ನೀರು ಬರಿದಾಗಿದೆ. ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಸಮಸ್ಯೆ ಪರಿಹಾರಕ್ಕೆ ಗ್ರಾಪಂ ಮತ್ತು ತಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನ ಜಾನುವಾರುಗಳಿಗೆ ನೀರಿನ ದಾಹ ಹೆಚ್ಚಾಗಿದೆ. ನೀರಿನ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಹಡಗಲಿ ಗ್ರಾಮದ ಎಸ್‌ಸಿ ಓಣಿ ಮತ್ತು ಕಂಬಳಿ ಓಣಿಕಡೆ ನೀರು ಬರುತ್ತಿಲ್ಲ. ಪೈಪ್‌ಲೈನ್‌ಗೆ ವಾಲ್‌ಗಳನ್ನು ಅಳವಡಿಸುವ ಮೂಲಕ ಎಲ್ಲ ಕಡೆ ಸಮರ್ಪಕ ನೀರು ಸರಬರಾಜು ಮಾಡಬೇಕೆಂದು ಹಡಗಲಿ ಗ್ರಾಮದ ನಿವಾಸಿ ಬಸಪ್ಪ ಕಂಬಳಿ ಆಗ್ರಹಿಸಿದ್ದಾರೆ.  ಟ್ಯಾಂಕರ್ ನೀರು ಖರೀದಿಸಿ ಜಾನುವಾರು ತೊಟ್ಟಿಗೆ ನೀರು ಸಂಗ್ರಹಿಸಿ ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಹನುಮಂತ ಗೊಲ್ಲರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net