

ಮುದಗಲ್: ಪ್ರಸಕ್ತ ಸಾಲಿನಲ್ಲಿ 99 ಜನ ಫಲಾನುಭವಿಗಳು ಜಾನುವಾರು ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದು, ಎಲ್ಲರಿಗೂ ಕೂಲಿ ಹಣ ಪಾವತಿಸಲಾಗಿದೆ ಎಂದು ಪಿಡಿಒ ತಿಮ್ಮಣ್ಣ ಭೋವಿ ತಿಳಿಸಿದರು.
ತಲೇಖಾನ್ ಗ್ರಾಪಂನಲ್ಲಿ ಬುಧವಾರ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ರಾಠೋಡ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ, ಕುಡಿವ ನೀರು, ತೆರಿಗೆ ಹಾಗೂ ವಸತಿ ವಿಷಯಗಳ ಬಗ್ಗೆ ಚರ್ಚಿಸಬಹುದು ಎಂದರು.
ಸಭೆಯಲ್ಲಿ ಪಿಡಿಒ ನರೇಗಾ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸದಸ್ಯರಾದ ಮೌನೇಶ, ಬಸವರಾಜ, ನಮ್ಮ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ನರೇಗಾ ಕೂಲಿ ಹಣ ಪಾವತಿಸಿಲ್ಲ, ಮೊದಲು ಹಣ ಪಾವತಿಸಿ’ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಇತ್ತ ಸದಸ್ಯರಾದ ಮಾನಸಿಂಗ್, ಹನುಮಂತ ಗಂಟಿ, ದುರುಗಪ್ಪ ಕಟ್ಟಿಮನಿ ಯಾವುದೇ ದೂರು-ದುಮ್ಮಾನಗಳಿಗೆ ಆಸ್ಪದ ನೀಡದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದಾಗ, ಪಿಡಿಒ ತಿಮ್ಮಣ್ಣ ಭೋವಿ ಅವರು, ಎಲ್ಲ ಸದಸ್ಯರು ಸಹಕಾರ ನೀಡಬೇಕು. ಈ ವರ್ಷದಲ್ಲ್ಲಿ 99 ಜಾನುವಾರು ಶೆಡ್‌ಗಳನ್ನು ನಿರ್ಮಿಸಲಾಗಿದೆ. ಹೆಚ್ಚುವರಿ ಕಾಮಗಾರಿ ಹೊರತುಪಡಿಸಿ ಸಾಮಾನ್ಯ ಕ್ರಿಯಾ ಯೋಜನೆಯ ಕಾಮಗಾರಿಗಳಿಗೆ ಎನ್‌ಎಂಆರ್ ಹಾಕಲಾಗಿದೆ ಎಂದರು.
ಅಂತಿಮವಾಗಿ ಕುಡಿವ ನೀರು, ವಿದ್ಯುತ್ ಸಾಮಗ್ರಿ ಖರೀದಿ ಸೇರಿದಂತೆ ಸಣ್ಣಪುಟ್ಟ ಬಿಲ್‌ಗಳನ್ನು ಪಾವತಿಸಲು ಸಭೆಯಲ್ಲಿ ಸದಸ್ಯರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು. ಸದಸ್ಯರಾದ ಪಾಂಡುರಂಗ ನಾಯ್ಕ, ವೀರನಗೌಡ, ಹನುಮಂತ ತಲೇಖಾನ್, ಮಲ್ಲಮ್ಮ ಶರಣಪ್ಪ, ಚನ್ನಮ್ಮ ಸೊಂಪೂರ, ಶಾರದಾ ತಲೇಖಾನ್, ಕಾರ್ಯದರ್ಶಿ ಥಾಮಸ್, ಡಿಇಒ ಶರಣಬಸವರಾಜ ಇದ್ದರು.