

ಮುದಗಲ್ : ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡದಿಂದ ಪಟ್ಟಣದ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಶನಿವಾರ ನಡೆಸಿತು. ಬೀದಿಬದಿಯ ಕೆಲವು ಅಂಗಡಿಗಳ ವ್ಯಾಪಾರಸ್ಥರು ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದರಿಂದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಳದಿಂದ ಸಮಸ್ಯೆ ಉಂಟಾಗಿತ್ತು. ಪಿಎಸ್‌ಐ ವೆಂಕಟೇಶ ಮಾಡಗೇರಿ, ಪುರಸಭೆ ಮುಖ್ಯಾಧಿಕಾರಿ ನಬೀಸಾಬ್ ಕಂದಗಲ್ ಫುಟ್‌ಪಾತ್ ಮಾರ್ಗಗಳಲ್ಲಿ ಸಂಚರಿಸಿ ಜನರಿಗೆ, ಪ್ರಯಾಣಿಕರಿಗೆ, ವಾಹನ ಚಾಲಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ುಟ್‌ಪಾತ್ ಅತಿಕ್ರಮವನ್ನು ತೆರವುಗೊಳಿಸಿದರು.